ಸುಬ್ರಹ್ಮಣ್ಯ (ದ.ಕ): ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಸ್ತಾರೋಗಣಿ ಕಾರ್ಯಕ್ರಮ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ನಡೆದು ಬರುತ್ತಿರುವ ಹೊಸ್ತಾರೋಗಣಿ ಕಾರ್ಯಕ್ರಮ ಸಂಬಂಧ ಬೆಳಗ್ಗೆ ದೇವರಿಗೆ ಮಹಾಭಿಷೇಕ, ಕದಿರು ಪೂಜೆ ಹಾಗೂ ದೇವತಾ ಕಾರ್ಯಗಳು ನಡೆದವು.
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಹೊಸ್ತಾರೋಗಣಿ ಕಾರ್ಯಕ್ರಮ ಸಂಪನ್ನ - ಕದಿರು ವಿತರಣಾ ಕಾರ್ಯ
ಬೆಳಗ್ಗೆ 5.30ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, 8 ಗಂಟೆಗೆ ಹೊಸ ಭತ್ತದ ತೆನೆ ತಂದು, ಬಳಿಕ ಕದಿರು ಪೂಜೆ ನಡೆಯಿತು. ನಂತರ ದೇಗುಲದ ನೌಕರರಿಗೆ ಹಾಗೂ ಸ್ಥಳಿಯ ಭಕ್ತಾದಿಗಳಿಗೆ ಪೂಜಿಸಿದ ಕದಿರು ವಿತರಣಾ ಕಾರ್ಯ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನೆರವೇರಿದ ಹೊಸ್ತಾರೋಗಣಿ ಕಾರ್ಯಕ್ರಮಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನೆರವೇರಿದ ಹೊಸ್ತಾರೋಗಣಿ ಕಾರ್ಯಕ್ರಮ
ಬೆಳಗ್ಗೆ 5.30ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, 8 ಗಂಟೆಗೆ ಹೊಸ ಭತ್ತದ ತೆನೆ ತಂದು, ಬಳಿಕ ಕದಿರು ಪೂಜೆ ನಡೆಯಿತು. ನಂತರ ದೇಗುಲದ ನೌಕರರಿಗೆ ಹಾಗೂ ಸ್ಥಳೀಯ ಭಕ್ತಾದಿಗಳಿಗೆ ಪೂಜಿಸಿದ ಕದಿರು ವಿತರಣಾ ಕಾರ್ಯ ನಡೆಯಿತು. ಪೂಜಾ ವಿಧಿ-ವಿಧಾನದಲ್ಲಿ ಕೊರೊನಾ ಸುರಕ್ಷತಾ ನಿಯಮಾವಳಿಗಳನ್ನು ಅನುಸರಿಸಲಾಯಿತು.