ಕರ್ನಾಟಕ

karnataka

ETV Bharat / state

ಜನಾರ್ದನ ಪೂಜಾರಿ ಚೇತರಿಕೆಗೆ ಪ್ರಾರ್ಥಿಸಿ ಗೋಕರ್ಣನಾಥನಿಗೆ ವಿಶೇಷ ಪೂಜೆ - Former Union Minister Janardhan Poojary

ಪೂಜಾರಿ ಹಾಗೂ ಅವರ ಕುಟುಂಬಸ್ಥರಲ್ಲಿ ಕೊರೊನಾ ಸೋಂಕು ದೃಢಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ದೇವಳ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಾರ್ದನ ಪೂಜಾರಿಯವರ ಅಭಿಮಾನಿಗಳ ವತಿಯಿಂದ ಸೀಯಾಳಾಭಿಷೇಕ ಹಾಗೂ ಮಹಾಪೂಜೆ ನೆರವೇರಿತು.

Worship of Gokarnanath swamy for cure of Former Union Minister Janardhan Poojary
ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಶೀಘ್ರ ಕೊರೊನಾ ಸೋಂಕು ಮುಕ್ತರಾಗಲು ಗೋಕರ್ಣನಾಥನಿಗೆ ಸೀಯಾಳಾಭಿಷೇಕ

By

Published : Jul 8, 2020, 1:04 PM IST

ಮಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಶೀಘ್ರ ಕೊರೊನಾ ಸೋಂಕು ಮುಕ್ತರಾಗಲಿ ಎಂದು ಪ್ರಾರ್ಥಿಸಿ ಕುದ್ರೋಳಿ ಗೋಕರ್ಣನಾಥ ದೇವರಿಗೆ 109 ಸೀಯಾಳಾಭಿಷೇಕ ನೆರವೇರಿಸಲಾಯಿತು.

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚೇತರಿಕೆಗೆ ವಿಶೇಷ ಪೂಜೆ

ಪೂಜಾರಿ ಹಾಗೂ ಅವರ ಕುಟುಂಬಸ್ಥರಲ್ಲಿ ಕೊರೊನಾ ಸೋಂಕು ದೃಢಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ದೇವಳ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಾರ್ದನ ಪೂಜಾರಿಯವರ ಅಭಿಮಾನಿಗಳ ವತಿಯಿಂದ ಸೀಯಾಳಾಭಿಷೇಕ ಹಾಗೂ ಮಹಾಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಟಿ. ಕೆ. ಸುಧೀರ್, ಮಾಜಿ ಮೇಯರ್ ಅಶ್ರಫ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ. ಸಿ. ಭಂಡಾರಿ, ಕುದ್ರೋಳಿ ದೇವಳದ ಕೋಶಾಧಿಕಾರಿ ಪದ್ಮರಾಜ್.ಆರ್, ಮಾಜಿ ಮ.ನ.ಪಾ ಸದಸ್ಯ ಪುರುಷೋತ್ತಮ ಚಿತ್ರಾಪುರ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details