ಬಂಟ್ವಾಳ: ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ತೆನೆ ಹಬ್ಬವನ್ನು (ಪುರಲ್ಡ್ ಕುರಲ್ ಪರ್ಬ) ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಸರಳ ರೀತಿಯಲ್ಲಿ ಆಚರಿಸಲಾಯಿತು.
ಬಂಟ್ವಾಳ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತೆನೆ ಹಬ್ಬ ಆಚರಣೆ
ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ತೆನೆ ಹಬ್ಬ ಆಚರಿಸಲಾಯಿತು.
ಗದ್ದೆಯಿಂದ ತೆನೆಗಳನ್ನು ತಂದು ದೇವಳದ ಅರ್ಚಕರು ಸಾಂಪ್ರದಾಯಿಕ ಪೂಜಾ ವಿಧಿವಿಧಾನ ನೆರವೇರಿಸಿ ಬಳಿಕ ತೆನೆಗಳನ್ನು ಗುತ್ತಿನವರು, ಆಡಳಿತ ಮಂಡಳಿಯವರು ಹಾಗೂ ಸಾವಿರ ಸೀಮೆಯ ಭಕ್ತರಿಗೆ ವಿತರಿಸಿದರು. ಭಕ್ತರು ಸರದಿಯಲ್ಲಿ ನಿಂತು ಸಾಮಾಜಿಕ ಅಂತರ ಪಾಲಿಸಿಕೊಂಡು ತೆನೆ ಸ್ವೀಕರಿಸಿದರು. ಬಳಿಕ ತಮ್ಮ ಮನೆಗಳಲ್ಲಿ ತೆನೆ ಹಬ್ಬವನ್ನು ಆಚರಿಸಿ ಹೊಸ ಅಕ್ಕಿ ಊಟ ಮಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಭಟ್ ಪೊಳಲಿ, ಅನುವಂಶಿಕ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮೊದಲಾದವರು ಪಾಲ್ಗೊಂಡಿದ್ದರು.