ಕರ್ನಾಟಕ

karnataka

ETV Bharat / state

ಸೇವಾ ರೂಪದಲ್ಲಿ ಬೆಂಕಿ ಎರಚಾಟ... ಮೈ ಜುಮ್ಮೆನಿಸುತ್ತೆ ಈ ಜಾತ್ರೆಯ ಆಚರಣೆ - Kateel Temple

ಇದೊಂದು ಮೈ ಜುಮ್ಮೆನ್ನಿಸುವಂತಹ ಜಾತ್ರೆ. ಇಲ್ಲಿ ಬಣ್ಣ, ಭಂಡಾರ, ಯಾವುದೂ ಕಾಣುವುದಿಲ್ಲ. ಕಾಣುವುದು ಬೆಂಕಿ ಉಂಡೆ ಮಾತ್ರ. ಈ ಭಯಾನಕ ಹಾಗೂ ವಿಶಿಷ್ಟ ಜಾತ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಿಸಲಾಗುತ್ತದೆ.

ಕಟೀಲು ಶೀದೇವಿಯ ಅವಭ್ರತೋತ್ಸವ (ಆರಟ)

By

Published : Apr 22, 2019, 1:13 PM IST

ಮಂಗಳೂರು:ಪರಸ್ಪರ ದ್ವೇಷವುಳ್ಳವರು ಹೊಡೆದಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ, ಯಾವುದೇ ದ್ವೇಷವಿಲ್ಲದೇ ಪರಸ್ಪರ ಬೆಂಕಿಯ ಪಂಜು ಹಿಡಿದುಕೊಂಡು ಒಬ್ಬರ ಮೇಲೊಬ್ಬರು ಎಸೆಯುತ್ತಾ ಹೊಡೆದಾಡಿಕೊಳ್ಳುವ ವಿಶಿಷ್ಟ ಜಾತ್ರೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಅದುವೇ ಕಟೀಲು ಶ್ರೀದೇವಿಯ ಅವಭ್ರತೋತ್ಸವ (ಆರಟ). ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಈ ಆಕರ್ಷಕ ಹಾಗೂ ರೋಮಾಂಚನಕಾರಿ ಆರಟ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಯಾವುದೇ ರೀತಿಯ ದ್ವೇಷ ಇಲ್ಲಿ ಕಂಡುಬರುವುದಿಲ್ಲ. ಮೇಷ ಸಂಕ್ರಮಣದಿಂದ ಮೊದಲ್ಗೊಂಡು ಸುಮಾರು ಎಂಟು ದಿನಗಳ ಕಾಲ ಕಟೀಲು ಶ್ರೀ ದೇವಿ ವರ್ಷಾವಧಿ ಉತ್ಸವ ನಡೆಯುತ್ತದೆ. ಮೊದಲು ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಕೊನೆಯ ದಿನ ಶ್ರೀದೇವಿಯು ಬ್ರಹ್ಮರಥಾರೂಢಳಾಗಿ ದೇವಳದ ರಥಬೀದಿಯಲ್ಲಿ ಸವಾರಿ ಮಾಡುತ್ತಾಳೆ.

ಕಟೀಲು ಶೀದೇವಿಯ ಅವಭ್ರತೋತ್ಸವ (ಆರಟ)

ಬಳಿಕ ಅವಭ್ರತ ಸ್ನಾನದ ಹಿನ್ನೆಲೆ ಬೆಳ್ಳಂಬೆಳಗ್ಗೆ ಈ ಆರಟ ಜರುಗುತ್ತದೆ. ಕಟೀಲು ದೇವಾಲಯಕ್ಕೊಳಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮದ ಜನರ ನಡುವೆ ಈ ಅಗ್ನಿಕೇಳಿ ಅಥವಾ ಬೆಂಕಿಯ ಪಂಜನ್ನು ಎಸೆಯುವ ವಿಶಿಷ್ಟವಾದ ಆಟ ನಡೆಯುತ್ತದೆ. ಆದರೆ, ಈ ಭಯಾನಕ ಅಗ್ನಿಕೇಳಿಯಲ್ಲಿ ಯಾವುದೇ ರೀತಿಯ ಅವಘಡಗಳಾದ, ಯಾರಿಗೂ ಗಾಯಗಳಾದ ಘಟನೆ ಈವರೆಗೂ ನಡೆದಿಲ್ಲ. ಒಂದು ವೇಳೆ ಸಣ್ಣಪುಟ್ಟ ಗಾಯಗಳಾದರೂ ದೇವಿಯ ಪ್ರಸಾದವೇ ಇದಕ್ಕೆ ಔಷಧಿ ಎನ್ನುತ್ತಾರೆ ದೇವಳದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ.

ಶ್ರೀದೇವಿಯ ಸೇವಾ ರೂಪದಲ್ಲಿ ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಈ ಅಗ್ನಿಕೇಳಿ ಆಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅತ್ತೂರು ಹಾಗೂ ಕೊಡೆತ್ತೂರು ಈ ಎರಡೂ ಗ್ರಾಮದ ಜನರು ತಮಗೆ ಕಷ್ಟ ಕಾರ್ಪಣ್ಯಗಳು ಬಂದ್ರೆ ಹರಕೆ ರೂಪದಲ್ಲಿ ಈ ಸೇವೆಯನ್ನು ಸಲ್ಲಿಸುತ್ತಾರೆ. ಎರಡೂ ಗ್ರಾಮದ ಜನರೂ ಈ‌ ದಿನಗಳಲ್ಲಿ‌ ಸಾತ್ವಿಕ ಆಹಾರಗಳನ್ನು‌ ಸೇವಿಸಿ, ಮನೆಗೊಬ್ಬರಂತೆ ಈ ಸೇವಾ ಕೈಂಕರ್ಯದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಕೇವಲ ಸಾಂಕೇತಿಕ ದ್ವೇಷವನ್ನು ಪ್ರಕಟಗೊಳಿಸಲಾಗುತ್ತದೆ. ಆದರೆ, ಅಗ್ನಿಕೇಳಿಯ ಬಳಿಕ ಈ ದ್ವೇಷ ಮುಂದುವರಿಸುವುದಿಲ್ಲ ಎನ್ನುತ್ತಾರೆ ಅತ್ತೂರಿನ ಗ್ರಾಮಸ್ಥರು.

ABOUT THE AUTHOR

...view details