ಸುಬ್ರಹ್ಮಣ್ಯ:2006 ನೇ ಇಸವಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಚಂಪಾಷಷ್ಠಿ ಮಹೋತ್ಸವದಲ್ಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿದ ಸಂಗೀತ ಕಾರ್ಯಕ್ರಮವನ್ನು ಇಂದಿಗೂ ಹಲವರು ನೆನಪಿಸುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯೂ ಮೊಳಗಿತ್ತು ಎಸ್ಪಿಬಿ ಗಾನಾರ್ಚನೆ - SP Balasubramaniam songs at subramanya
ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ 14 ವರ್ಷಗಳ ಹಿಂದೆ ಬಾಲಸುಬ್ರಹ್ಮಣ್ಯಂ ಹಾಗೂ ಸಂಗಡಿಗರು ಸುಮಾರು ಮೂರು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನೀಡಿದ್ದರು.
![ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯೂ ಮೊಳಗಿತ್ತು ಎಸ್ಪಿಬಿ ಗಾನಾರ್ಚನೆ SP Balasubramaniam sings in Kukke Subramanya](https://etvbharatimages.akamaized.net/etvbharat/prod-images/768-512-8937179-566-8937179-1601038860303.jpg)
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ 14 ವರ್ಷಗಳ ಹಿಂದೆ ಬಾಲಸುಬ್ರಹ್ಮಣ್ಯಂ ಹಾಗೂ ಸಂಗಡಿಗರು ಸುಮಾರು ಮೂರು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನೀಡಿದ್ದರು. ಈ ಸಂದರ್ಭದಲ್ಲಿ ಇವರನ್ನು ಸುಳ್ಯ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಪರವಾಗಿ ಡಾ.ಕೆ.ವಿ ರೇಣುಕಾಪ್ರಸಾದ್ ಗೌರವಿಸಿದ್ದರು.
ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆದ ಈ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಂದಿಗೂ ಇಲ್ಲಿನ ಹಿರಿಯರು ನೆನಪಿಸುತ್ತಾರೆ.