ಕರ್ನಾಟಕ

karnataka

ETV Bharat / state

ಕಾರ್​ ಕಾರ್​ ಇಲ್ನೋಡಿ ಕಾರ್​.. ಕಾರಿನ ತುಂಬೆಲ್ಲ ಸೋನು​ ಸೂದ್: ರಿಯಲ್​ ಹೀರೋಗೆ ಬಂಟ್ವಾಳ ಫ್ಯಾನ್​ ಕೃತಜ್ಞತೆ - ಕಾರಿನ ಮೇಲೆಲ್ಲ ಸೋನುಸೂದ್ ಚಿತ್ರ

ಸೋನು ಸೂದ್​​ ಅಭಿಮಾನಿ ಶ್ರೀ ಪ್ರಸಾದ್ ಆಚಾರ್ಯ ಅವರು ತಮ್ಮ ಕಾರಿನ ಹೊರಭಾಗದಲ್ಲಿ ಎಲ್ಲರಿಗೂ ಕಾಣುವಂತೆ ಸೋನು ಸೂದ್ ಕುರಿತಾದ ಲೇಖನಗಳು, ಸಮಾಜ ಮುಖಿ ಕಾರ್ಯಗಳು, ಫೋಟೋಗಳು ಮತ್ತು ಅವರ ಸ್ಲೋಗನ್ ಬಳಸಿ ಕಾರನ್ನು ಮಾರ್ಪಾಡು ಮಾಡಿದ್ದಾರೆ.

sonusood photos and details on car
ವಿನ್ಯಾಸಗೊಂಡ ಕಾರು

By

Published : Jul 4, 2021, 10:41 AM IST

Updated : Jul 4, 2021, 4:48 PM IST

ಬಂಟ್ವಾಳ(ದಕ್ಷಿಣ ಕನ್ನಡ): ಕೋವಿಡ್ ಸಂದರ್ಭ ಸಮಾಜಸೇವೆ ಮೂಲಕ ದೇಶವಷ್ಟೇ ಅಲ್ಲ, ವಿಶ್ವದ ಗಮನ ಸೆಳೆದ, ಬಾಲಿವುಡ್ ಸಹಿತ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಮಿಂಚುತ್ತಿರುವ ನಟ ಸೋನು ಸೂದ್​ ಅವರ ಅಭಿಮಾನಿಯೊಬ್ಬರು ತಮ್ಮ ಕಾರು ತುಂಬೆಲ್ಲ ಸೋನುಸೂದ್ ಅವರ ಚಿತ್ರ, ವಿವರಗಳನ್ನು ಬರೆಸಿದ್ದಾರೆ.

ನಾನು ಮತ್ತು ಸಹೋದರಿ ಉಷಾ ಜಗದೀಶ್ ಆಚಾರ್ಯ, ಲಾಕ್​​ಡೌನ್ ಅವಧಿಯಲ್ಲಿ ಸೋನು ಸೂದ್ ನೆರವು ನೀಡಲು ಪ್ರಾರಂಭಿಸುವ ಮೊದಲೇ ಅವರ ಬಹುದೊಡ್ಡ ಅಭಿಮಾನಿಗಳಾಗಿದ್ದೆವು. ಆದರೆ ಸೋನು ಸೂದ್ ಅವರಿಗೆ ಕೃತಜ್ಞತೆ ಹೇಗೆ ಸಲ್ಲಿಸಬೇಕು ಎಂದು ತಿಳಿಯಲಿಲ್ಲ. ನಮ್ಮ ಕಾರನ್ನು ಅವರಿಗಾಗಿ ಮರು ವಿನ್ಯಾಸಗೊಳಿಸಲು ನಿರ್ಧರಿಸಿದೆವು. ಕಾರಿನ ಹೊರಭಾಗದಲ್ಲಿ ಎಲ್ಲರಿಗೂ ಕಾಣುವಂತೆ ನಾವು ಅವರ ಲೇಖನಗಳು, ಫೋಟೋಗಳು ಮತ್ತು ಅವರ ಸ್ಲೋಗನ್ ಬಳಸಿ ಕಾರನ್ನು ಮಾರ್ಪಾಡು ಮಾಡಿದೆವು ಎನ್ನುತ್ತಾರೆ ಅಭಿಮಾನಿ ಶ್ರೀ ಪ್ರಸಾದ್ ಆಚಾರ್ಯ.

ಕಾರಿನ ತುಂಬೆಲ್ಲ ಸೋನು​ ಸೂದ್ - ರಿಯಲ್​ ಹೀರೋಗೆ ಬಂಟ್ವಾಳ ಫ್ಯಾನ್​ ಕೃತಜ್ಞತೆ

ಲಾಕ್​ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ವ್ಯವಸ್ಥೆ, ರೋಗಿಗಳಿಗೆ ಹಾಸಿಗೆ, ವೈದ್ಯಕೀಯ ಆಮ್ಲಜನಕ ಒದಗಿಸುವುದು ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಮಂದಿಗೆ ಸಹಾಯಹಸ್ತ ಚಾಚಿದದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಸುಮಾರು 1 ಕೋಟಿ ರೂ.ಗೂ ಅಧಿಕ ಮೊತ್ತದಲ್ಲಿ ನಿರ್ಮಾಣವಾಗುವ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಶೇ. 80ರಷ್ಟು ನೆರವು ನೀಡಿದ್ದಾರೆ. ಈ ಮೂಲಕ ಲಕ್ಷಾಂತರ ಮಂದಿಯ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಅವರ ಅಪ್ಪಟ ಅಭಿಮಾನಿಯಾಗಿರುವ ಹಲವು ಕಿರುಚಿತ್ರ, ಸಂಗೀತ ಆಲ್ಬಂಗಳಿಗೂ ತನ್ನದೇ ಟಚ್ ಮೂಲಕ ಭಿನ್ನವಾಗಿ ಚಿತ್ರೀಕರಿಸಿದ ಭರವಸೆಯ ಸೃಜನಶೀಲ ವಿಡಿಯೋಗ್ರಾಫರ್ ಬಂಟ್ವಾಳದ ಶ್ರೀಪ್ರಸಾದ್ ಆಚಾರ್ಯ ಅವರು ತಮ್ಮ ಕಾರಿನ ಮೇಲೆಲ್ಲ ಚಿತ್ರನಟ ಸೋನುಸೂದ್​ ಅವರ ಚಿತ್ರ ಹಾಕಿಸಿದ್ದಾರೆ.

ಕಾರಿನ ಎದುರು ಬಾನೆಟ್​ನಲ್ಲಿ ಸೋನು ಸೂದ್​ ಚಿತ್ರವಿದ್ದರೆ, ಬಲ, ಎಡ ಭಾಗಗಳು, ಹಿಂದಿನ ಗಾಜು ತುಂಬೆಲ್ಲಾ ಸೋನು ಸೂದ್ ಮಾಡಿದ ಕೋವಿಡ್ ಸೇವೆಯದ್ದೇ ವಿಚಾರ. ಶ್ರೀಟಾಕೀಸ್ ಹೆಸರಿನಲ್ಲಿ ಕಾರ್ಯಾಚರಿಸುವ ಶ್ರೀ ಪ್ರಸಾದ್ ಅವರ ಕಾರು ಹೊರಟಿತೆಂದರೆ, ಸೋನುಸೂದ್ ಕೋವಿಡ್ ಸಂದರ್ಭ ಏನೆಲ್ಲ ಸೇವೆ ಮಾಡಿದರು ಎಂಬುದು ರಸ್ತೆಯುದ್ದಕ್ಕೂ ಕಾಣುತ್ತದೆ. ಇವರ ಕಾರ್ಯಕ್ಕೆ ಸಹೋದರಿ ಶ್ರೀ ಉಷಾ ಜಗದೀಶ್ ಆಚಾರ್ಯ ಸಾಥ್ ನೀಡಿದ್ದಾರೆ.

ವಿನ್ಯಾಸಗೊಂಡ ಕಾರು

ಇದನ್ನೂ ಓದಿ:ವರ್ಚುವಲ್ ವೃತ್ತವಾಗಿ ಬದಲಾದ ಕೆ.ಆರ್. ಸರ್ಕಲ್.. ಇದರ ವಿಶೇಷತೆ ಏನ್ ಗೊತ್ತಾ..?

ತನ್ನ ಸ್ನೇಹಿತ ಶಿವು ಬಂಟ್ವಾಳ ಜತೆ ಚರ್ಚಿಸಿ ಕಾರು ವಿನ್ಯಾಸಗೊಳಿಸಿದರು. ಸೋನು ಕುರಿತು ಪ್ರಕಟವಾದ ಲೇಖನಗಳು, ನಾನು ಇಲ್ಲಿರುವುದು ರಾಜಕೀಯಕ್ಕಾಗಿ ಅಲ್ಲ, ಬದಲಾಗಿ ಹೃದಯಗಳನ್ನು ಗೆಲ್ಲಲು ಎಂಬ ಸ್ಲೋಗನ್ ಬಳಸಿಕೊಂಡು ಬೆಂಗಳೂರಿನಲ್ಲಿ ಕಾರಿನ ಹೊರಭಾಗವನ್ನು ವಿನ್ಯಾಸಗೊಳಿಸಲಾಯಿತು. ಇದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದದ್ದನ್ನು ಗಮನಿಸಿದ ಸ್ನೇಹಿತರಾದ ಚರಣ್, ನಿಖಿಲ್ ಮತ್ತು ಅಭಯ್ ರಾವ್ ಅವರು ಸೋನು ಸೂದ್ ಗಮನಕ್ಕೆ ತಂದಿದ್ದಾರೆ. ಸ್ವತಃ ಸೋನು ಇದನ್ನು ಗಮನಿಸಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

Last Updated : Jul 4, 2021, 4:48 PM IST

ABOUT THE AUTHOR

...view details