ಮಂಗಳೂರು: ಮಂಗಳೂರು ಮೂಲದ ದಂಪತಿಯು ದೂರದ ನ್ಯೂಜಿಲ್ಯಾಂಡ್ನಲ್ಲಿ ಭೀಕರವಾಗಿ ಹತ್ಯೆಗೊಳಗಾಗಿರುವ ಘಟನೆ ನಡೆದಿದೆ.
ನಗರದ ಬಲ್ಮಠ ನಿವಾಸಿಗಳಾಗಿರುವ ಎಲ್ಸಿ ಬಂಗೇರ ಮತ್ತು ಹರ್ಮನ್ ಬಂಗೇರ ಹತ್ಯೆಗೀಡಾದವರು. ಅವರ ಪುತ್ರ ಶೀಲ್(23) ಹತ್ಯೆ ಮಾಡಿದವನೆಂದು ಆರೋಪಿಸಲಾಗಿದ್ದು, ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಶೀಲ್ ಇತ್ತೀಚಿನ ದಿನಗಳಲ್ಲಿ ಹೆತ್ತವರಿಂದ ದೂರ ಇರಲು ಪ್ರಯತ್ನಿಸಿ, ತನ್ನಿಚ್ಛೆಯಂತೆ ಬದುಕಲು ಅಭಿಲಾಷೆ ಹೊಂದಿದ್ದನು. ಈ ಹಿನ್ನೆಲೆಯಲ್ಲಿ ಹೆತ್ತವರೊಂದಿಗೆ ಜಗಳ ಮಾಡುತ್ತಿದ್ದನು. ಕಳೆದ ಶುಕ್ರವಾರ ಕೂಡಾ ಇದೇ ಕಾರಣಕ್ಕಾಗಿ ಜಗಳ ಮಾಡಿ ಹೆತ್ತ ತಾಯಿ - ತಂದೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಹೆತ್ತವರು ಮೃತಪಟ್ಟ ಬಳಿಕ ಆತನೂ ಆತ್ಮಹತ್ಯೆ ಮಾಡಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.