ಮಂಗಳೂರು:ತಂದೆ ಮಗನ ನಡುವೆ ಜಗಳ ಉಂಟಾಗಿ ಮಗ ತಂದೆಯನ್ನೇ ಹತ್ಯೆಗೈದಿರುವ ಘಟನೆ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಮಗನಿಂದಲೇ ವೃದ್ಧ ತಂದೆಯ ಬರ್ಬರ ಹತ್ಯೆ - son killed his father in mangaluru
ಮಗನೇ ತಂದೆಯನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮಂಗಳೂರಿನ ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಾಜೆ ಗ್ರಾಮದ ಬೊಳ್ಳಿಂಬಳದ ನಿವಾಸಿಯಾದ ಕೃಷ್ಣ ನಾಯ್ಕ್(65) ಕೊಲೆಯಾದ ವ್ಯಕ್ತಿ. ಮೃತನ ಮಗ ಉದಯ ನಾಯ್ಕ್ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿರುತ್ತಿದ್ದು, ಈ ಬಗ್ಗೆ ತಂದೆ ಮತ್ತು ಮಗನಿಗೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇಂದು ಮಧ್ಯಾಹ್ನ ಕೂಡ ಈ ವಿಚಾರವಾಗಿ ತಂದೆ -ಮಗನ ನಡುವೆ ಕಲಹ ತಾರಕಕ್ಕೇರಿ ಉದಯ ನಾಯ್ಕ್ ಮಚ್ಚಿನಿಂದ ತಂದೆ ಕೃಷ್ಣ ನಾಯ್ಕ್ ರವರ ಕುತ್ತಿಗೆ ಕಡಿದಿದ್ದು, ಇದರಿಂದ ಗಂಭೀರ ಗಾಯಗೊಂಡ ಕೃಷ್ಣ ನಾಯ್ಕ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿ ಉದಯ ನಾಯ್ಕ್ ನನ್ನು ಬಂಧಿಸಲಾಗಿದೆ.