ಮಂಗಳೂರು(ದಕ್ಷಿಣ ಕನ್ನಡ):ರಜೆಗೆಂದು ಊರಿಗೆ ಬಂದಿದ್ದ ಬಿಎಸ್ಎಫ್ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಕುಲಶೇಖರದ ಉಮಿಕಾನ ನಿವಾಸಿ ಹರೀಶ್ ಕುಮಾರ್ (43) ಮೃತಪಟ್ಟವರು.
ಬಿಎಸ್ಎಫ್ ಯೋಧರಾಗಿದ್ದ ಹರೀಶ್ ಅವರು ಕಳೆದ 21 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 142ನೇ ಬೆಟಾಲಿಯನ್ ಒಡಿಶಾದಲ್ಲಿ ಅವರು ಕರ್ತವ್ಯದಲ್ಲಿದ್ದರು. ಕಳೆದ ಕೆಲವು ದಿನಗಳ ಹಿಂದೆ ರಜೆಗೆಂದು ಊರಿಗೆ ಬಂದಿದ್ದ ಹರೀಶ್ ಅವರಿಗೆ ಡಿ.31ರಂದು ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.