ಕರ್ನಾಟಕ

karnataka

ETV Bharat / state

ಕೆಂಪೇಗೌಡರ ಎದುರು ಯಾವ ಟಿಪ್ಪು ಇಲ್ಲ.. ಪ್ರತಿಮೆ ವಿಚಾರದಲ್ಲಿ ಟಿಪ್ಪುವನ್ನು ಎಳೆದು ತಂದ ನಳಿನ್ ಕುಮಾರ್ - ಈಟಿವಿ ಭಾರತ​ ಕರ್ನಾಟಕ

ಕೆಂಪೇಗೌಡರ ಪ್ರತಿಮೆ ವಿಚಾರದಲ್ಲಿ ಟಿಪ್ಪುವನ್ನು ನಳಿನ್ ಕುಮಾರ್ ಕಟೀಲ್ ಎಳೆದು ತಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು ಎಂಬ ವಿಚಾರ ಕೇಳಿಬಂದಿತ್ತು. ಆದರೆ ಕೆಂಪೇಗೌಡರ ಎದುರು ಯಾವ ಟಿಪ್ಪು ಇಲ್ಲ ಎಂದು ಕಟೀಲ್​ ಹೇಳಿದ್ದಾರೆ.

Etv Bharatsoil-collection-campaign-launched-for-kempegowda-theme-park
ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ

By

Published : Oct 26, 2022, 1:52 PM IST

Updated : Oct 26, 2022, 5:47 PM IST

ಮಂಗಳೂರು(ದಕ್ಷಿಣ ಕನ್ನಡ): ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಪ್ರತಿಮೆ ವಿಚಾರದಲ್ಲಿ ಟಿಪ್ಪುವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಳೆದು ತಂದಿದ್ದಾರೆ.

ಕೆಂಪೇಗೌಡರ ಎದುರು ಯಾವ ಟಿಪ್ಪುನೂ ಇಲ್ಲ.. ನಳಿನ್ ಕುಮಾರ್ ಕಟೀಲ್

ಮಂಗಳೂರಿನಲ್ಲಿ ಇಂದು ನಡೆದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆಯ ಪಾರ್ಕ್​ಗೆ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಎದುರು ಟಿಪ್ಪು ಯಾವ ಲೆಕ್ಕನೂ ಅಲ್ಲ. ವಿಮಾನ ನಿಲ್ದಾಣಕ್ಕೆ ಹೆಸರಿಡುವ ವೇಳೆ ಬೇರೆ ಬೇರೆಯವರ ಹೆಸರು ಕೇಳಿಬಂತು. ಆಗ ಟಿಪ್ಪು ಹೆಸರು ಇಡಬೇಕು ಎಂದು ಕೆಲವರು ಹೇಳಿದ್ದರು. ಮೈಸೂರು ಒಡೆಯರು ಮತ್ತು ನಾಡಪ್ರಭು ಕೆಂಪೇಗೌಡರ ನಡುವೆ ಟಿಪ್ಪು ಏನೂ ಅಲ್ಲ ಎಂದರು.

ನಾಡಪ್ರಭು ಕೆಂಪೇಗೌಡರು ಮತ್ತು ಮೈಸೂರು ಒಡೆಯರ ನಡುವೆ ಉತ್ತಮ ಆಡಳಿತ ಸಂಬಂಧ ಇತ್ತು. ಬೆಂಗಳೂರು ಜಗತ್ತಿನ ಪ್ರಸಿದ್ಧ ನಗರವಾಗಿ ಆಗಬೇಕಾದರೆ ಕೊಡುಗೆ ನೀಡಿದ್ದು ಕೆಂಪೇಗೌಡರು. ಅವರ ಆಡಳಿತದ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮಾಡಲು ರಾಜ್ಯದ ಎಲ್ಲಾ ಕಡೆಗಳಿಂದ ಮಣ್ಣು ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದರು.

ಇನ್ನು, ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಧರ್ಮಪಾಲನಾಥ ಅವರು ಇತಿಹಾಸದ ಪುಟಗಳನ್ನು ವಾಸ್ತವಿಕ ಆಧಾರದಲ್ಲಿ ಜನರಿಗೆ ಮಾಹಿತಿ ನೀಡಬೇಕಾಗಿದೆ. ಆದರೆ ಈವರೆಗೆ ತಿರುಚಿದ ಇತಿಹಾಸವನ್ನು ಸತ್ಯ ಎಂದು ನಂಬಿದ್ದೇವೆ. ದೇಶಕ್ಕಾಗಿ ತ್ಯಾಗ ಮಾಡಿದ, ಸಾಧನೆ ಮಾಡಿದ ಮಹನೀಯರನ್ನು ಸ್ಮರಿಸುವ ಕೆಲಸ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಸುಸಜ್ಜಿತ ಪಟ್ಟಣ ಯಾವ ರೀತಿ ಇರಬೇಕೆಂದು ಕಲ್ಪನೆಯಲ್ಲಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿದರು. ಪ್ರಗತಿಯ ವೇಗದಲ್ಲಿ ಬೆಂಗಳೂರು ನೂರು ಪಟ್ಟು ಬೆಳೆದಿದ್ದು, ಇದಕ್ಕೆ ಅಡಿಪಾಯ ಹಾಕಿದ್ದು ಕೆಂಪೇಗೌಡರು ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆಯ ಪಾರ್ಕ್ ಗೆ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನ ಇಂದು ಮಂಗಳೂರಿನಲ್ಲಿ ಆರಂಭವಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತೆರಳಿ ಮಣ್ಣು ಸಂಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಮೆಯ ಬಳಿ ನಿರ್ಮಾಣವಾಗುವ ಪಾರ್ಕ್​ಗೆ ಕೊಂಡೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾಧಿಕಾರಿ, ದ.ಕ ಜಿಲ್ಲಾ ಪಂಚಾಯತ್ ಸಿಇಓ ಡಾ ಕುಮಾರ್ ಮೊದಲಾದವರು‌ ಉಪಸ್ಥಿತರಿದ್ದರು.

ಇದನ್ನೂ ಓದಿ :ಕನ್ನಡ ನಾಡನ್ನು ಸಮೃದ್ದಿಯ ನಾಡನ್ನಾಗಿಸಲು ‘ಪ್ರಗತಿ ಪ್ರತಿಮೆ’ ಪ್ರೇರಣೆ: ಬೊಮ್ಮಾಯಿ

Last Updated : Oct 26, 2022, 5:47 PM IST

ABOUT THE AUTHOR

...view details