ಮಂಗಳೂರು: ಸಿರಿಬಾಗಿಲುವಿನಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿತವಾಗಿರುವುದರಿಂದ ನಾಳೆ ಮಧ್ಯಾಹ್ನದವರೆಗಿನ ಮಂಗಳೂರು- ಬೆಂಗಳೂರು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ರೈಲ್ವೆ ಹಳಿ ಮೇಲೆ ಮಣ್ಣು ಕುಸಿತ: ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ! - ರೈಲು ಸಂಚಾರ ಸ್ಥಗಿತ
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಹಾಸನ ಜಿಲ್ಲೆಯ ಸಕಲೇಶಪುರದ ಮಧ್ಯೆ ಇರುವ ಸಿರಿಬಾಗಿಲಿನಲ್ಲಿ ರೈಲ್ವೆ ಹಳಿಯಲ್ಲಿ ಮಣ್ಣು ಕುಸಿತವಾಗುತ್ತಿರುವುದರಿಂದ ನಾಳೆ ಮಧ್ಯಾಹ್ನದವರೆಗೆ ಕಾರವಾರ, ಕಣ್ಣೂರುನಿಂದ ಮಂಗಳೂರು ಮೂಲಕ ಬೆಂಗಳೂರು ತೆರಳಬೇಕಿದ್ದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
![ರೈಲ್ವೆ ಹಳಿ ಮೇಲೆ ಮಣ್ಣು ಕುಸಿತ: ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ!](https://etvbharatimages.akamaized.net/etvbharat/prod-images/768-512-4072411-thumbnail-3x2-net.jpg)
ಹಾಸನ ಜಿಲ್ಲೆಯ ಸಕಲೇಶಪುರದ ಮಧ್ಯೆ ಇರುವ ಸಿರಿಬಾಗಿಲಿನಲ್ಲಿ ರೈಲ್ವೆ ಹಳಿಯಲ್ಲಿ ಮಣ್ಣು ಕುಸಿತ
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಹಾಸನ ಜಿಲ್ಲೆಯ ಸಕಲೇಶಪುರದ ಮಧ್ಯೆ ಇರುವ ಸಿರಿಬಾಗಿಲಿನಲ್ಲಿ ರೈಲ್ವೆ ಹಳಿಯಲ್ಲಿ ಮಣ್ಣು ಕುಸಿತವಾಗುತ್ತಿರುವುದರಿಂದ ನಾಳೆ ಮಧ್ಯಾಹ್ನದವರೆಗೆ ಕಾರವಾರ, ಕಣ್ಣೂರುನಿಂದ ಮಂಗಳೂರು ಮೂಲಕ ಬೆಂಗಳೂರು ತೆರಳಬೇಕಿದ್ದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ನಿನ್ನೆಯಿಂದ ಈ ರೈಲು ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಕೇರಳ, ತಮಿಳುನಾಡು ಮಾರ್ಗದಲ್ಲಿ ಓಡಿಸಲಾಗಿತ್ತು. ಆದರೆ ರೈಲ್ವೆ ಹಳಿಯಲ್ಲಿ ಮಣ್ಣು ಕುಸಿತವಾಗುತ್ತಿರುವುದರಿಂದ ಇಂದು ಮತ್ತು ನಾಳೆ ಮಧ್ಯಾಹ್ನದ ರೈಲ್ವೆ ಸಂಚಾರವನ್ನು ಇಲಾಖೆ ಸ್ಥಗಿತಗೊಳಿಸಿದೆ.