ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಕಾಪಾಡಲು ವಿಶಿಷ್ಟ ಸಲಹೆ ನೀಡಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ - social worker who gave special advice

ಸಾಮಾಜಿಕ ಅಂತರ ಕಾಪಾಡಲು ಸಾಮಾಜಿಕ ಕಾರ್ಯಕರ್ತ ಗಿಲ್ಬರ್ಟ್ ಡಿಸೋಜಾ ಅವರು ವಿಶಿಷ್ಟ ಸಲಹೆಯೊಂದನ್ನು ನೀಡಿದ್ದಾರೆ.

Mangalore
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಗಿಲ್ಬರ್ಟ್ ಡಿಸೋಜ

By

Published : Jul 1, 2021, 12:32 PM IST

ಮಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ತಡೆಯಲು ಹಲವಾರು ಮಂದಿ ನಾನಾ ರೀತಿಯ ಸಲಹೆ ನೀಡುತ್ತಾರೆ. ಕೊರೊನಾ ಹರಡಲು ಸಾಮಾಜಿಕ ಅಂತರ ಕಾಪಾಡದಿರುವುದು ಕೂಡ ಒಂದು ಕಾರಣ. ಈ ಸಾಮಾಜಿಕ ಅಂತರ ಕಾಪಾಡಲು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಗಿಲ್ಬರ್ಟ್ ಡಿಸೋಜಾ ವಿಶಿಷ್ಟ ಸಲಹೆಯೊಂದನ್ನು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಸಾಮಾಜಿಕ ಅಂತರ ಕಾಪಾಡಲು ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಂಡು ಜಾರಿ ಮಾಡಬಹುದು. ಪ್ರತಿಯೊಬ್ಬರಲ್ಲಿ ಇರುವ ಮೊಬೈಲ್ ಸಂಖ್ಯೆಯ ಕೊನೆಯ ಸಂಖ್ಯೆ ಇಟ್ಟುಕೊಂಡು ಅವರು ಮನೆಯಿಂದ ಹೊರ ಬಂದು ಖರೀದಿಗೆ ಅವಕಾಶ ನೀಡಬೇಕು ಎಂಬ ಸಲಹೆ ನೀಡಿದ್ದಾರೆ.

ಸಾಮಾಜಿಕ ಅಂತರ ಕಾಪಾಡಲು ಗಿಲ್ಬರ್ಟ್ ಡಿಸೋಜಾ ನೀಡಿದ ಸಲಹೆ

ಮೊಬೈಲ್​​ನ ಕೊನೆಯ ನಂಬರ್ 1 ಆಗಿದ್ದವರು ಬೆಳಗ್ಗೆ 8-9 ಗಂಟೆ, 2 ಆಗಿದ್ದವರು 9-10, 3 ಆಗಿದ್ದವರು 10-11, 4 ಆಗಿದ್ದವರು 11-12, 5 ಆಗಿದ್ದವರು 12-1, 6 ಆಗಿದ್ದವರು 1-2, 7 ಆಗಿದ್ದವರು 2-3, 8 ಆಗಿದ್ದವರು 3-4, 9 ಆಗಿದ್ದವರು 4-5,0 ಆಗಿದ್ದವರು 5-6 ಗಂಟೆಯ ಮಧ್ಯೆ ಹೊರಗೆ ಹೋಗಿ ಸಾಮಗ್ರಿ ಖರೀದಿಗೆ ಅವಕಾಶ ಮಾಡಬೇಕು. ಈ ರೀತಿ ಮಾಡಿದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details