ಕರ್ನಾಟಕ

karnataka

ETV Bharat / state

ನರಸಿಂಹ ಸ್ವಾಮಿ ಮಠದ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶ್ರಮದಾನ

ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದಲ್ಲಿ ಪ್ರವಾಹ ಎದುರಾಗಿ ಜನರು ಮನೆ, ಜಮೀನು ಕಳೆದುಕೊಂದು ನಿರಾಶ್ರಿತರಾಗಿದ್ದರು. ಈ ಸಂಬಂಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರೆ ಶ್ರಮದಾನ ನಡೆಯಿತು.

Mangalore district

By

Published : Aug 17, 2019, 3:16 AM IST

ಮಂಗಳೂರು:ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ನೆರೆ ಶ್ರಮದಾನ ನಡೆಯಿತು.

ನರಸಿಂಹ ಸ್ವಾಮಿ ಮಠದ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರೆ ಶ್ರಮದಾನ

ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ‌ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ಶ್ರಮದಾನ ನಡೆಯುತ್ತಿದ್ದು, ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸರ ಮುಂದಾಳತ್ವದಲ್ಲಿ ಚಾರ್ಮಾಡಿ ಗ್ರಾಮದ ಹೊಸ್ಮಠ ಪರ್ಲ್ಲಾನಿ ಎಂಬ ನೆರೆ ಪೀಡಿತ ಪ್ರದೇಶದಲ್ಲಿ ಈ ಶ್ರಮದಾನ ನಡೆಯುತ್ತಿದೆ.

ಮನೆಯ ಹೊರಗೆ ಬಿದ್ದಿರುವ ತ್ಯಾಜ್ಯ ವಿಲೇವಾರಿ, ಮಣ್ಣು ತೆರವು ಕಾರ್ಯಾಚರಣೆ ಹಾಗೂ ಮನೆಯ ಒಳಗಡೆ ತುಂಬಿಕೊಂಡಿರುವ ಕೆಸರು ಮಣ್ಣುಗಳನ್ನು ಸ್ವಚ್ಛಗೊಳಿಸುವ ಕಾರ್ಯವೂ ಶ್ರಮದಾನದ ಮೂಲಕ ನೆರವೇರಿತು.

ನಿನ್ನೆಯಿಂದ ಸುಮಾರು 50 ಮಂದಿಯಿಂದ ಶ್ರಮದಾನ ಕಾರ್ಯ ನಡೆಯುತ್ತಿದ್ದು, ನೆರೆಯಿಂದ ಕಳೆದುಕೊಂಡಿರುವ ಮನೆಗಳಿಗೆ ಬೇಕಾದ ಅಡುಗೆ ಪದಾರ್ಥಗಳ ವಿತರಣೆಯ ಕಾರ್ಯವೂ ನಡೆಯಿತು.

ABOUT THE AUTHOR

...view details