ಕರ್ನಾಟಕ

karnataka

ETV Bharat / state

ನಮೀಬಿಯಾದಿಂದ ಬಂದ ಚೀತಾ ಪ್ರಗ್ನೆಂಟ್​.. ಎಫ್​ಬಿಯಲ್ಲಿ ವ್ಯಂಗ್ಯದ ಪೋಸ್ಟ್, ಸಾಮಾಜಿಕ ಕಾರ್ಯಕರ್ತ ಅರೆಸ್ಟ್​​ - ಚೀತಾ ಬಗ್ಗೆ ಅವಹೇಳನಕಾರಿ ಪೋಸ್ಟ್

ಫೇಸ್‌ಬುಕ್‌ನಲ್ಲಿ ವ್ಯಂಗ್ಯವಾಡಿ ಪೋಸ್ಟ್ ಮಾಡಿದ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಮೇರೆಗೆ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರನ್ನು ಬಂಧಿಸಲಾಗಿದೆ.

Social activist Sunil Bazilakeri
ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ

By

Published : Oct 8, 2022, 10:56 AM IST

ಮಂಗಳೂರು: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಗರ್ಭಿಣಿ ಮಹಿಳೆ ಮುಖಕ್ಕೆ ಚೀತಾ ಚಿತ್ರ ಬಳಸಿ ವ್ಯಂಗ್ಯ ಮಾಡಿದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ.

ಸುನೀಲ್ ಬಜಿಲಕೇರಿ ಅವರು ಫೇಸ್‌ಬುಕ್‌ನಲ್ಲಿ ಗರ್ಭಿಣಿಯ ಫೋಟೋಗೆ ಚೀತಾದ ಮುಖ ಎಡಿಟ್ ಮಾಡಿ ‌'ನಮೀಬಿಯಾ ಚೀತಾಗೆ ಸೀಮಂತ ಯಾವಾಗ?' ಅಂತಾ ಪೋಸ್ಟ್ ಹಾಕಿದ್ದರು.

ಈ ಫೇಸ್​​ಬುಕ್ ಪೋಸ್ಟ್ ಗರ್ಭಿಣಿ ಮತ್ತು ಭಾರತೀಯ ಸಂಸ್ಕೃತಿಗೆ ಅವಹೇಳನ ಎಂದು ಎಡಪದವು ಗ್ರಾಮದ ಮಹಿಳೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ನಿನ್ನೆ ರಾತ್ರಿ ಸುನೀಲ್ ಬಜಿಲಕೇರಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುನೀಲ್ ಬಜಿಲಕೇರಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಕಟು ಟೀಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ಆಫ್ರಿಕನ್​ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ

ABOUT THE AUTHOR

...view details