ಕರ್ನಾಟಕ

karnataka

ETV Bharat / state

ಬಂಟ್ವಾಳ: 22 ಕೆರೆ ಹಾವಿನ ಮರಿಗಳ ರಕ್ಷಿಸಿದ ಸ್ನೇಕ್​​ ಕಿರಣ್​ - 22 ಕೆರೆ ಹಾವಿನ ಮರಿಗಳ ರಕ್ಷಣೆ

ಬಂಟ್ವಾಳ ತಾಲೂಕಿನ ಉರಗ ತಜ್ಞ ಕಿರಣ್ ಮನೆಯೊಂದರಲ್ಲಿ ಕಂಡುಬಂದಿದ್ದ 22 ಕೆರೆ ಹಾವಿನ ಮರಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

22 ಕೆರೆ ಹಾವಿನ ಮರಿಗಳನ್ನು ರಕ್ಷಣೆ ಮಾಡಿದ ಸ್ನೇಕ್​​ ಕಿರಣ್​
22 ಕೆರೆ ಹಾವಿನ ಮರಿಗಳನ್ನು ರಕ್ಷಣೆ ಮಾಡಿದ ಸ್ನೇಕ್​​ ಕಿರಣ್​

By

Published : Dec 6, 2020, 9:24 PM IST

ಬಂಟ್ವಾಳ : ಬಂಟ್ವಾಳ ತಾಲೂಕಿನ ಉರಗ ತಜ್ಞ ಸ್ನೇಕ್ ಕಿರಣ್ ಅವರು ಮನೆಯೊಂದರಲ್ಲಿ ಕಂಡು ಬಂದಿದ್ದ ಕೆರೆಹಾವಿನ 22 ಮೊಟ್ಟೆಗಳನ್ನು ರಕ್ಷಿಸಿ, ಅವುಗಳನ್ನು ವೈಜ್ಞಾನಿಕ ವಿಧಾನದ ಮೂಲಕ ಮರಿ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಓದಿ : ಇಮೇಜ್ ಇದ್ರೆ ಅಲ್ವಾ ಡೌನ್ ಆಗೋದು: ಕುಮಾರಸ್ವಾಮಿಗೆ ಗುಟುರು ಹಾಕಿದ 'ಟಗರು'!

ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು ನಿವಾಸಿ ಲಕ್ಷ್ಮಣ್ ಮನೆಯ ಬಳಿ ಮಳೆಗೆ ನೆಲ ಕುಸಿದಿದ್ದು, ಸುಮಾರು 22 ಕೆರೆ ಹಾವಿನ ಮೊಟ್ಟೆಗಳು ಕಂಡುಬಂದಿದ್ದವು. ಈ ಕುರಿತು ಬಂಟ್ವಾಳ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಬಳಿಕ ಅರಣ್ಯ ಇಲಾಖೆ ನಿರ್ದೇಶನದಲ್ಲಿ ಸ್ನೇಕ್ ಕಿರಣ್ ಮೊಟ್ಟೆಗಳಿಂದ ವೈಜ್ಞಾನಿಕ ಕ್ರಮದ ಮೂಲಕ 20 ಮರಿಗಳನ್ನು ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಕೆರೆ ಹಾವಿನ ಮೊಟ್ಟೆ​

ಹಾವಿನ ಮರಿಗಳನ್ನು ರಕ್ಷಿತಾರಣ್ಯಕ್ಕೆ ಬಿಡುವ ವೇಳೆ ಅರಣ್ಯ ಇಲಾಖೆಯ ಎಸಿಎಫ್ ಸುಬ್ರಹ್ಮಣ್ಯ ರಾವ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಡಿಆರ್‌ಎಫ್ಒ ಅನಿಲ್, ಸಿಬ್ಬಂದಿ ಮನೋಜ್, ನಿತ್ಯಪ್ರಕಾಶ್ ಬಂಟ್ವಾಳ ಉಪಸ್ಥಿತರಿದ್ದರು.

ಕೆರೆ ಹಾವಿನ ಮರಿಗಳನ್ನು ರಕ್ಷಣೆ ಮಾಡಿದ ಸ್ನೇಕ್​​ ಕಿರಣ್​

ABOUT THE AUTHOR

...view details