ಕರ್ನಾಟಕ

karnataka

ETV Bharat / state

ಅಡುಗೆ ಮನೆ ಸೇರಿದ್ದ ಕಾಳಿಂಗ... ಒಲೆ ಹಚ್ಚಲು ಬಂದು ಓಟ ಕಿತ್ತ ಮನೆ ಮಂದಿ - belthangadi of dakshnina kannada

ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಬೆಳ್ತಂಗಡಿಯ ಮನೆಯೊಂದರ ಅಡುಗೆ ಕೋಣೆಯಲ್ಲಿ ಸೇರಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

snake
snake

By

Published : Apr 2, 2020, 1:58 PM IST

ಬೆಳ್ತಂಗಡಿ:ಲಾಕ್ ಡೌನ್ ಹಿನ್ನೆಲೆಯಿಂದ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿರುವ ಈ ಸಮಯದಲ್ಲಿ ಕಾಳಿಂಗ ಸರ್ಪವೊಂದು ಮನೆಯ ಅಡುಗೆ ಕೋಣೆ ಸೇರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಅಡುಗೆ ಮನೆ ಸೇರಿದ್ದ ಕಾಳಿಂಗ ಸರ್ಪ

ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಬೆಳ್ತಂಗಡಿಯ ಮನೆಯೊಂದರ ಅಡುಗೆ ಕೋಣೆಯಲ್ಲಿ ಸೇರಿಕೊಂಡು ಬುಸುಗುಟ್ಟುತ್ತಿತ್ತು.

ಶಬ್ದ ಕೇಳಿದ ಮನೆಯವರು ಹೋಗಿ ನೋಡಿದಾಗ ಸರ್ಪ ಇದ್ದದ್ದನ್ನು ನೋಡಿ ಗಾಬರಿಗೊಂಡು ಹೊರಗಡೆ ಓಡಿ ಹೋಗಿದ್ದಾರೆ.

ಕಾಳಿಂಗ ಸರ್ಪದ ರಕ್ಷಣೆ

ಈ ಘಟನೆ ಲಾಯ್ಲ ಸಮೀಪದ ಕೊಯ್ಯೂರು ಕ್ರಾಸ್​ನ ರೋಹಿಣಿ ಎಂಬುವವರ ಮನೆಯಲ್ಲಿ ನಡೆದಿದೆ. ತಕ್ಷಣ ಬೆಳ್ತಂಗಡಿಯ ಸ್ನೇಕ್ ಅಶೋಕ್ ಅವರಿಗೆ ವಿಷಯ ತಿಳಿಸಿದಾಗ ಅವರು ಬಂದು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ABOUT THE AUTHOR

...view details