ಕರ್ನಾಟಕ

karnataka

ETV Bharat / state

ಹಾವು ರಕ್ಷಿಸಲು ಹೋಗಿ ಪ್ರಾಣಬಿಟ್ಟ 'ಸ್ನೇಕ್​ ಮುಸ್ತಫಾ' - ಉಪ್ಪಿನಂಗಡಿಯಲ್ಲಿ ಉರಗ ರಕ್ಷಕ ಸಾವು

ಬೇರೆಯವರ ಮನೆಗೆ ಹಾವುಗಳು ಬಂದರೆ ಹಿಡಿದು ಕಾಡಿಗೆ ಬಿಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಉರಗ ರಕ್ಷಕ ಹಾವು ಕಡಿತದಿಂದ ಕೊನೆಯುಸಿರೆಳೆದಿದ್ದಾರೆ.

snake mustafa dies
ಸ್ನೇಕ್​ ಮುಸ್ತಫಾ ಸಾವು

By

Published : Apr 18, 2021, 12:04 PM IST

Updated : Apr 18, 2021, 2:28 PM IST

ಉಪ್ಪಿನಂಗಡಿ(ದಕ್ಷಿಣ ಕನ್ನಡ) :ಯಾರದೇ ಮನೆಗೆ ವಿಷಕಾರಿ ಹಾವುಗಳು ಬಂದರೆ ಅದನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದ 34ನೇ ನೆಕ್ಕಿಲಾಡಿ ನಿವಾಸಿ 'ಸ್ನೇಕ್ ಮುಸ್ತಾ' ಎಂದೇ ಚಿರಪರಿಚಿತನಾಗಿದ್ದ ಎಂ.ಆರ್. ಮುಹಮ್ಮದ್ ಮುಸ್ತಫಾ ನಾಗರಹಾವಿನ ಕಡಿತದಿಂದ ಮೃತಪಟ್ಟಿದ್ದಾರೆ.

34 ನೇ ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲೊನಿಯ ನಿವಾಸಿಯಾಗಿದ್ದ ಎಂ.ಆರ್ ಮುಸ್ತಫಾ, ವೃತ್ತಿಯಲ್ಲಿ ಅಟೋ ರಿಕ್ಷಾ ಚಾಲಕನಾಗಿದ್ದ. ಯಾರ ಮನೆಗಾದರು ವಿಷಕಾರಿ ಹಾವುಗಳು ಬಂದರೆ ಮುಸ್ತಫಾಗೆ ಕರೆ ಮಾಡುತ್ತಿದ್ದರು. ಆಗ ಆತ ಸ್ಥಳಕ್ಕೆ ತೆರಳಿ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಿದ್ದರು.

ಮುಸ್ತಫಾ ನಾಗರ ಹಾವಿನ ಕಡಿತಕ್ಕೊಳಗಾದ ದೃಶ್ಯ

ಓದಿ : ಅಯ್ಯೋ ದುರ್ವಿಧಿಯೇ.. ಬೆಂಗಳೂರಲ್ಲಿ ಮಹಾಮಾರಿ ಕೋವಿಡ್​ಗೆ 6 ತಿಂಗಳ ಹಸುಗೂಸು ಬಲಿ

ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂದಿತ್ತು. ಮನೆ ಮಂದಿ ಮುಸ್ತಫಾಗೆ ಕರೆ ಮಾಡಿದ್ದರು. ಸ್ಥಳಕ್ಕೆ ತೆರಳಿದ ಮುಸ್ತಫಾ ಹಾವು ಹಿಡಿಯುತ್ತಿದ್ದ ಸಂದರ್ಭ ಹಾವು ಕಚ್ಚಿತ್ತು. ಇದರಿಂದ ವಿಷವೇರಿ ತೀವ್ರ ಅಸ್ವಸ್ಥಗೊಂಡಿದ್ದ ಮುಸ್ತಫಾನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮುಸ್ತಫಾ ಕೊನೆಯಸಿರೆಳೆದಿದ್ದಾರೆ.

Last Updated : Apr 18, 2021, 2:28 PM IST

ABOUT THE AUTHOR

...view details