ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಏಕಾಏಕಿ ಸ್ಥಗಿತ; ಅಬ್ದುಲ್ ರವೂಫ್ - Manapa opposition Leader Abdul Rauf

ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿಯ ಯೋಜನೆಗಳನ್ನು ಕೈಬಿಟ್ಟು ಬೇರೆಯೇ ಕಾಮಗಾರಿಗಳು ನಡೆಯುತ್ತಿವೆ. ಪೂರ್ಣಗೊಂಡಿರುವ ಎಲ್ಲ ಕಾಮಗಾರಿಗಳೂ ಕಳಪೆ ಮಟ್ಟದ್ದಾಗಿದೆ ಎಂದು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.

Abdul Rauf
ಅಬ್ದುಲ್ ರವೂಫ್

By

Published : Jan 1, 2021, 3:44 PM IST

ಮಂಗಳೂರು:ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿವೆ. ಜಿಲ್ಲಾಡಳಿತ ಈ ಬಗ್ಗೆ ಏನೂ ಕ್ರಮ ಕೈಗೊಳ್ಳದೆ ಸಂಪೂರ್ಣ ವಿಫಲವಾಗಿದೆ ಎಂದು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಕೈಬಿಟ್ಟು ಬೇರೆಯೇ ಕಾಮಗಾರಿಗಳು ನಡೆಯುತ್ತಿವೆ. ಪೂರ್ಣಗೊಂಡಿರುವ ಎಲ್ಲ ಕಾಮಗಾರಿಗಳೂ ಕಳಪೆ ಮಟ್ಟದ್ದಾಗಿವೆ ಎಂದು ದೂರಿದರು.

ಓದಿ:ಮದ್ಯ ಮಾರಾಟ ಇಳಿಕೆ.. ಕಳೆದ ವರ್ಷಕ್ಕಿಂತ ಶೇ 20 ಆದಾಯ ಕುಸಿತ

ನಿನ್ನೆ ನಮ್ಮ ನಿಯೋಗದ ವತಿಯಿಂದ ನಗರದ ಕಾರ್ ಸ್ಟ್ರೀಟ್ ನಲ್ಲಿರುವ ರಥಬೀದಿಯ ಕಾಮಗಾರಿ ವೀಕ್ಷಿಸಲು ಹೋಗಿದ್ದೆವು. ಅಲ್ಲಿ ಇನ್ನೂ ರಸ್ತೆ ಉದ್ಘಾಟನೆಯಾಗಿಲ್ಲ. ಆದರೆ ಎಲ್ಲ ಕಡೆಗಳಲ್ಲಿ ರಸ್ತೆಗಳು ಬಿರುಕು ಬಿಟ್ಟಿವೆ. ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ABOUT THE AUTHOR

...view details