ಮಂಗಳೂರು: ವಿವಿಧ ಯೋಜನೆ ಅಡಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮಂಗಳೂರಿಗೆ 20 ಸಾವಿರ ಕೋಟಿ ಹಣ ಹರಿದುಬಂದಿದ್ದು, ಅದರಲ್ಲಿ 1000 ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಂಸದ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು
ನರೇಂದ್ರ ಮೋದಿ ಸರ್ಕಾರದಿಂದ ವಿವಿಧ ಯೋಜನೆಯಡಿ 20 ಸಾವಿರ ಕೋಟಿ ಮಂಗಳೂರಿಗೆ ಮಂಜೂರಾಗಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಮಾರ್ಗದ ಯೋಜನೆಯು ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಇದೀಗ ಅದರ ಮರು ಟೆಂಡರ್ ನಡೆದು ಮಾರ್ಚಿನಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಸಾವಿರ ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿ ಎಂದ ಕಟೀಲ್ ಮಂಗಳೂರು-ಕಾರ್ಕಳ ನಡುವಿನ ಚತುಷ್ಪತ ರಸ್ತೆ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು ಟೆಂಡರ್ ಹಂತಕ್ಕೆ ಬಂದಿದೆ. ಐದು ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. 10 ಸಾವಿರ ಕೋಟಿ ವೆಚ್ಚದಲ್ಲಿ ಶಿರಾಡಿ ಸುರಂಗ ಮಾರ್ಗ ಯೋಜನೆಯ ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದರು.
ಕೊಚ್ಚಿಯಿಂದ ಮಂಗಳೂರಿಗೆ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ ವರ್ಗಾವಣೆಗೊಂಡಿದ್ದು, ಇದರ ಶಿಲಾನ್ಯಾಸವು ಎರಡು ತಿಂಗಳಲ್ಲಿ ನಡೆಯಲಿದೆ. ಹಲವು ಬೃಹತ್ ಕೈಗಾರಿಕೆಗಳು ಇರುವ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಕೂಡ ಸೇರ್ಪಡೆಯಾಗಲಿದೆ ಎಂದು ತಿಳಿಸಿದರು.