ಕರ್ನಾಟಕ

karnataka

ETV Bharat / state

ಜ್ವರದಿಂದ ಬಳಲುತ್ತಿದ್ದ ಆರನೇ ತರಗತಿ ವಿದ್ಯಾರ್ಥಿ ಸಾವು: ಮೆದುಳು ಜ್ವರ ಶಂಕೆ - ಶಾಲಾ ವಾರ್ಷಿಕೋತ್ಸವ

ಆರನೇ ತರಗತಿ ವಿದ್ಯಾರ್ಥಿ ಜ್ವರದಿಂದ ಸಾವು - ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ - ಶಾಲಾ ವಾರ್ಷಿಕೋತ್ಸವದ ಕಿರು ನಾಟಕದಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿ ಕೊಂಡಿದ್ದ ಅಶ್ವಿತ್.

Sixth class student died due to fever in Mangalore
ಮೆದುಳು ಜ್ವರ ಶಂಕೆ

By

Published : Dec 30, 2022, 10:57 AM IST

ಉಳ್ಳಾಲ(ದಕ್ಷಿಣ ಕನ್ನಡ): ಕಳೆದೆರಡು ದಿವಸಗಳಿಂದ ತಲೆನೋವು, ಜ್ವರದಿಂದ ಬಳಲುತ್ತಿದ್ದ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿತ್ ಇಂದು ಸಾವನ್ನಪ್ಪಿದ್ದು, ಬಾಲಕ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಜ್ವರದ ನಡುವೆಯೂ ಅಶ್ವಿತ್ ಶಾಲಾ ವಾರ್ಷಿಕೋತ್ಸವದ ಕಿರು ನಾಟಕದಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದನಂತೆ.

ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಶಾಲಾ ಆಡಳಿತ ಮಂಡಳಿ, ಕುಟುಂಬ ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಎರಡು ವರ್ಷಗಳ ಹಿಂದೆ ಅಶ್ವಿತ್​ನ ತಂದೆ ಅವಘಡವೊಂದರಲ್ಲಿ ಸಾವನ್ನಪ್ಪಿದ್ದರು. ಕೊಲ್ಯ ಸಾರಸ್ವತ ಕಾಲೊನಿಯ ಮನೆಯಲ್ಲಿ ಅಶ್ವಿತ್ ತಾಯಿಯೊಂದಿಗೆ ವಾಸವಿದ್ದ. ಅಶ್ವಿತ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿ ಪಾತ್ರನಾಗಿದ್ದ.

ಮೃತ ಅಶ್ವಿತ್​ಗೆ ಕೊನೆಯ ಕ್ಷಣದಲ್ಲಿ ಮೆದುಳು ಜ್ವರದ ಲಕ್ಷಣ ಇತ್ತೆಂದು ಹೇಳಲಾಗಿದೆ. ಆತನಿಗೆ ಮೆದುಳು ಜ್ವರದ ವ್ಯಾಕ್ಸಿನೇಷನ್‌ ಆಗಿದೆಯೇ ಎಂದು ಇನ್ನೂ ಧೃಡಪಟ್ಟಿಲ್ಲ. ಈ ಬಗ್ಗೆ ತಜ್ಞ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಬಾಲಕನ ಅಂತ್ಯ ಸಂಸ್ಕಾರ ಗುರುವಾರ ಮಧ್ಯಾಹ್ನ ನಡೆದಿದೆ.

ಇದನ್ನೂ ಓದಿ:10 ಮತ್ತು 12ನೇ ತರಗತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ ಸಿಬಿಎಸ್​ಇ

ABOUT THE AUTHOR

...view details