ಕರ್ನಾಟಕ

karnataka

ETV Bharat / state

6 ಮಂಗಗಳ ಮೃತ ದೇಹ ಪತ್ತೆ.. ಜನರಲ್ಲಿ ಆತಂಕ - ಬೆಳ್ತಂಗಡಿ ಸುದ್ದಿ,

6 ಮಂಗಗಳ ಮೃತ ದೇಹಗಳು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ಸಮೀಪ ಮಂಡಾಜೆ ರಸ್ತೆ ಬಳಿ ಕಂಡು ಬಂದಿದೆ.

Six monkeys died, Six monkeys died in Belthangady, Belthangady news, Belthangady monkey news, ಆರು ಮಂಗಗಳ ಮೃತ ದೇಹಗಳು ಪತ್ತೆ, ಬೆಳ್ತಂಗಡಿಯಲ್ಲಿ ಆರು ಮಂಗಗಳ ಮೃತ ದೇಹಗಳು ಪತ್ತೆ, ಬೆಳ್ತಂಗಡಿ ಸುದ್ದಿ, ಬೆಳ್ತಂಗಡಿ ಕೋತಿ ಸುದ್ದಿ,
6 ಮಂಗಗಳ ಮೃತ ದೇಹಗಳು ಪತ್ತೆ

By

Published : Mar 12, 2021, 10:35 AM IST

ಬೆಳ್ತಂಗಡಿ:ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ 6 ಮಂಗಗಳ ಮೃತದೇಹ ಪತ್ತೆಯಾಗಿವೆ.

ಈಗಾಗಲೇ ಹಲವು ಕಡೆಗಳಲ್ಲಿ ಮಂಗನ ಕಾಯಿಲೆಯ ಅತಂಕ ಇರುವುದರಿಂದ, ಈ ರೀತಿ ರಸ್ತೆ ಬದಿ ಮೃತ ದೇಹಗಳು ಪತ್ತೆಯಾಗುತ್ತಿರುವುದರಿಂದ ಎಂದು ಜನರು ಗಾಬರಿಗೊಳ್ಳುತ್ತಿದ್ದಾರೆ.

ಮಂಗಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಸ್ತೆಯ ಬದಿಯಲ್ಲಿ ಬಿದ್ದಿರಬಹುದಾದ ವಿಷ ಪದಾರ್ಥ ಸೇವಿಸಿವೆಯಾ, ಯಾರಾದರೂ ಉದ್ದೇಶಪೂರ್ವಕವಾಗಿ ವಿಷವಿಕ್ಕಿದ್ದಾರೆಯೇ ಅಥವಾ ಇನ್ನೇನಾದರೂ ಆಗಿದೆಯೇ ಎಂಬುದು ತನಿಖೆ ಮೂಲಕ ತಿಳಿದು ಬರಬೇಕಾಗಿದೆ.

ಈಗಾಗಲೇ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಬಂದ ನಂತರವೇ ಹೆಚ್ಚಿನ ಮಾಹಿತಿ ತಿಳಿಯಲಿದೆ.

ABOUT THE AUTHOR

...view details