ಕರ್ನಾಟಕ

karnataka

ETV Bharat / state

ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗಳು.. ರಸ್ತೆ, ಸೇತುವೆಯಿಲ್ಲದೇ ಸಿರಿಬಾಗಿಲು ಜನರಿಗೆ ನರಕಯಾತನೆ - ಸೇತುವೆಯಿಲ್ಲದೇ ಸಂಚಾರ ಸ್ಥಗಿತ

ಮಳೆಗಾಲದಲ್ಲಿ ಸಿರಿಬಾಗಿಲು ಗ್ರಾಮದ ಸುತ್ತ ಇರುವ ಮೂರು ಹೊಳೆಗಳು ತುಂಬಿ ಹರಿಯುತ್ತಿವೆ. ಆದ್ರೆ ಸೇತುವೆಯಿಲ್ಲದೇ ಇಲ್ಲಿನ ಜನರಿಗೆ ಅಗತ್ಯ ಕಾರ್ಯಗಳಿಗಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸಲು ಸಮಸ್ಯೆಯಾಗಿದೆ.

putturu latest news
ಸಿರಿಬಾಗಿಲು ಗ್ರಾಮಸ್ಥರ ಸಮಸ್ಯೆ

By

Published : Jul 20, 2021, 1:51 PM IST

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಿರಿಬಾಗಿಲು ಎನ್ನುವ ಗ್ರಾಮ ಮಳೆಗಾಲದಲ್ಲಿ ಇತರೆ ಪ್ರದೇಶಗಳ ಸಂಪರ್ಕವನ್ನೇ ಕಳೆದುಕೊಂಡುಬಿಡುತ್ತೆ. ಮಳೆಗಾಲ ಮುಗಿಯುವ ತನಕ ಇಲ್ಲಿನ ಜನರು ನರಕಯಾತನೆ ಅನುಭವಿಸುತ್ತಾರೆ.

ಶಿರಾಡಿಘಾಟ್​ನ ಮಧ್ಯಭಾಗದಲ್ಲಿರುವ ಈ ಗ್ರಾಮದ ಸುತ್ತ ಮೂರು ಹೊಳೆಗಳು ಹರಿಯುತ್ತಿವೆ. ಮಳೆಗಾಲದಲ್ಲಿ ಇವು ತುಂಬಿ ಹರಿಯುತ್ತವೆ. ಆದ್ರೆ ಸೇತುವೆಯಿಲ್ಲದೇ ಇಲ್ಲಿನ ಜನರಿಗೆ ಅಗತ್ಯ ಕಾರ್ಯಗಳಿಗಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸಲು ಸಮಸ್ಯೆಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಹೆಚ್ಚಾಗುತ್ತಿದೆ.

ಸಿರಿಬಾಗಿಲು ಗ್ರಾಮಸ್ಥರ ಸಮಸ್ಯೆ

ಪುತ್ತೂರು ತಾಲೂಕಿನ ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸಿರಿಬಾಗಿಲು ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇಲ್ಲಿನ ಪುಟ್ಟ ಮಕ್ಕಳು ಅಂಗನವಾಡಿಗೆ ಹೋಗಬೇಕೆಂದರೂ ಸುಮಾರು 4 ಕಿಲೋಮೀಟರ್​ಗಳಷ್ಟು ನಡದೇ ಹೋಗಬೇಕು. ಹೈಸ್ಕೂಲ್ ಮಕ್ಕಳು 5 ಕಿಲೋಮೀಟರ್​ಗಳಷ್ಟು ಕಾಡು ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆಯಿದೆ. ಇದು ಈ ಗ್ರಾಮದ ಬೇಸಿಗೆ, ಚಳಿಗಾಲ ಋತುವಿನ ಕಥೆಯಾದರೆ, ಮಳೆಗಾಲದಲ್ಲಿ ಮತ್ತೊಂದು ಸಮಸ್ಯೆಯನ್ನು ಎದುರಿಸುತ್ತಾರೆ.

ಸಂಚಾರಕ್ಕೆ ಸಮಸ್ಯೆ:

ದಟ್ಟ ಕಾಡುಗಳ ನಡುವೆಯೇ ಇರುವ ಈ ಗ್ರಾಮದ ಮಧ್ಯದಲ್ಲಿ ಮೂರು ಹೊಳೆಗಳು ಹರಿಯುತ್ತಿದ್ದು, ಮಳೆಗಾಲದಲ್ಲಿ ನೀರಿನ ಮಟ್ಟ ವಿಪರೀತ ಏರಿಕೆಯಾಗುವುದರಿಂದಾಗಿ ಇಲ್ಲಿನ ಜನ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಲು ಸಮಸ್ಯೆ ಎದುರಿಸುತ್ತಾರೆ. ಹಲವು ಬಾರಿ ತಮ್ಮ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿಕೊಡುವಂತೆ ಸ್ಥಳೀಯ ಆಡಳಿತ, ಎಂ.ಎಲ್.ಎ ಸೇರಿದಂತೆ ಹಲವರಿಗೆ ಸಾಕಷ್ಟು ಮನವಿಗಳನ್ನು ಮಾಡಿದರೂ, ಜನರ ಸಮಸ್ಯೆಗೆ ಈವರೆಗೂ ಪರಿಹಾರ ದೊರೆತಿಲ್ಲ.

ಇದನ್ನೂ ಓದಿ:ಚಿಕ್ಕಮಗಳೂರು ಪೊಲೀಸರ ಭರ್ಜರಿ ಬೇಟೆ.. ದರೋಡೆಗೆ ಯತ್ನಿಸುತ್ತಿದ್ದ ನಾಲ್ವರು ಅಂದರ್​

ಮಳೆಗಾಲದ ಸಂದರ್ಭದಲ್ಲಿ ಈ ಗ್ರಾಮದ ಜನರೇನಾದರೂ ಅನಾರೋಗ್ಯ ಪೀಡಿತರಾದಲ್ಲಿ ವೈದ್ಯಕೀಯ ಚಿಕಿತ್ಸೆ ಎನ್ನುವುದು ಮರೀಚಿಕೆಯಂತಾಗುತ್ತದೆ. ಗ್ರಾಮೀಣಾಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತದೆಯಾದರೂ ಇಂಥಹ ಸಮಸ್ಯೆ ಸರಿಯಾಗಿಲ್ಲ.

ಇಲ್ಲಿನ ಜನ ವಿದ್ಯಾಭ್ಯಾಸಕ್ಕಾಗಿ ತಮ್ಮ ಮಕ್ಕಳನ್ನು ಬೇರೆ ಪ್ರದೇಶಗಳಲ್ಲಿ ಬಿಟ್ಟು ಓದಿಸಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಿಕೊಂಡು ಬರುತ್ತಿದ್ದಾರೆ. ಕಾಲೇಜಿಗೆ ಹೋಗುವ ಹಲವು ವಿದ್ಯಾರ್ಥಿಗಳು ಇಲ್ಲಿದ್ದರೂ, ಕಾಡುದಾರಿಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ಹಾಗೂ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲೇ ಓಡಾಡಬೇಕಾದ ಅನಿವಾರ್ಯತೆ ಇದೆ.

ABOUT THE AUTHOR

...view details