ಕರ್ನಾಟಕ

karnataka

ETV Bharat / state

ನಗರ ಪ್ರದೇಶದಲ್ಲಿ ಕಂಡು ಬಂದ ಸಿಂಗಲೀಕ ಕೋತಿಗಳು - Singletons found in urban

ಯುವ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಟೀಂ ವೈಲ್ಡ್ ಡಿಕೆಯ ಸಾತ್ವಿಕ್ ಪಿ.ಎಸ್., ರಾಕೇಶ್ ಹಾಗೂ ಧ್ಯಾನ್ ನೇತೃತ್ವದ ತಂಡ ವಲಸೆ ಹಕ್ಕಿಗಳ ಸಾಕ್ಷ್ಯಚಿತ್ರ ಮಾಡಲು ಕೆಂಜಾರು ಸಮೀಪದ ರೈಲು ಮಾರ್ಗದ ಬಳಿ ತೆರಳಿದ್ದ ವೇಳೆ ಸಿಂಗಲೀಕ ದಂಡು ಕ್ಯಾಮರಾ ಕಣ್ಣಿಗೆ ಬಿದ್ದಿದೆ.

singletons
ಸಿಂಗಲೀಕ

By

Published : Nov 4, 2020, 10:09 PM IST

ಮಂಗಳೂರು:ದಟ್ಟಡವಿಗಳಲ್ಲಿ ಕಂಡು ಬರುವ ಕೋತಿಯ ಜಾತಿಗೆ ಸೇರಿದ ಸಿಂಗಲೀಕವು ನಗರದ ಜನವಸತಿ ಪ್ರದೇಶವಾದ ಕೆಂಜಾರು ಪ್ರದೇಶಗಳಲ್ಲಿ ಕಂಡು ಬಂದಿದೆ‌. ಹವ್ಯಾಸಿ ಛಾಯಾಗ್ರಹಕರ ತಂಡದ ಕ್ಯಾಮರಾ ಕಣ್ಣಿಗೆ ಸಿಂಗಲೀಕಗಳು ಗೋಚರವಾಗಿದ್ದು, ಈ ತಂಡವು ಇದೀಗ 'ಅರ್ಬನ್ ಲಂಗೂರ್' ಎಂಬ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ.

ಯುವ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಟೀಂ ವೈಲ್ಡ್ ಡಿಕೆಯ ಸಾತ್ವಿಕ್ ಪಿ.ಎಸ್., ರಾಕೇಶ್ ಹಾಗೂ ಧ್ಯಾನ್ ನೇತೃತ್ವದ ತಂಡ ವಲಸೆ ಹಕ್ಕಿಗಳ ಸಾಕ್ಷ್ಯಚಿತ್ರ ಮಾಡಲು ಕೆಂಜಾರು ಸಮೀಪದ ರೈಲು ಮಾರ್ಗದ ಬಳಿ ತೆರಳಿದ್ದ ವೇಳೆ ಸಿಂಗಲೀಕ ದಂಡು ಇವರ ಕ್ಯಾಮರಾ ಕಣ್ಣಿಗೆ ಬಿದ್ದಿದೆ.

ನಗರ ಪ್ರದೇಶದಲ್ಲಿ ಕಂಡು ಬಂದ ಸಿಂಗಲೀಕ ಕೋತಿಗಳು

ಜನವಸತಿ ಪ್ರದೇಶಗಳಿಂದ ದೂರದ ಅರಣ್ಯಗಳಲ್ಲಿರುವ ಈ ಸಿಂಗಲೀಕಗಳು ನಗರದ ಮಧ್ಯೆಯೇ ಬೀಡುಬಿಟ್ಟಿರುವುದನ್ನು‌ ನೋಡಿದ ಛಾಯಾಗ್ರಹಕರ ತಂಡ ಪಕ್ಷಿ ಸಾಕ್ಷ್ಯಚಿತ್ರವನ್ನು ಕೈಬಿಟ್ಟು 'ಅರ್ಬನ್ ಲಂಗೂರ್' ಸಾಕ್ಷ್ಯಚಿತ್ರ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಆ ಬಳಿಕ ಅದೇ ಪ್ರದೇಶದಲ್ಲಿ ವಾರಗಟ್ಟಲೆ ಕಾದು ಕುಳಿತರೂ ಸಿಂಗಲೀಕಗಳ ಸುಳಿವಿಲ್ಲ.

ಹೆಚ್ಚಾಗಿ ಭಾರತದ ಗೋವಾ, ಕುದುರೆಮುಖ, ಹಂಪಿ, ಕೇರಳ ಮುಂತಾದ ಕಡೆಗಳಲ್ಲಿ ದಟ್ಟ ಅಡವಿಗಳಲ್ಲಿ ಕಾಣಸಿಗುವ ಈ ಸಿಂಗಲೀಕಗಳು ಕೆಂಜಾರಿನಂತಹ ರೈಲು, ಬಸ್​ಗಳು ಓಡಾಡುವ ಪ್ರದೇಶಗಳಲ್ಲಿ ಕಂಡು ಬಂದಿರೋದೇ ಆಶ್ಚರ್ಯಕರ ಸಂಗತಿ‌. ಆಹಾರ ಅನ್ವೇಷಣೆಗಾಗಿ ಕ್ರಮಿಸುವ ಸಿಂಗಲೀಕಗಳು ಇಲ್ಲಿಗೂ ಅದೇ ರೀತಿಯಲ್ಲಿ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ABOUT THE AUTHOR

...view details