ಸುಳ್ಯ :ಕೊರೊನಾ ಹಿನ್ನೆಲೆ ಈ ಬಾರಿಯ ಕ್ರಿಸ್‍ಮಸ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಗಿದೆ.
ಕಳೆದ ಏಳೆಂಟು ತಿಂಗಳಿಂದ ಜನರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ಇದರ ನಡುವೆ ಹಬ್ಬ-ಹರಿದಿನಗಳು ನಡೆಯುತ್ತಿವೆ. ಅದರಂತೆ ಮಂಗಳೂರು, ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿನ ಎಲ್ಲಾ ಚರ್ಚ್ಗಳಲ್ಲಿ ಕ್ರಿಸ್‍ಮಸ್ ಆಚರಣೆ ಸಂಭ್ರಮದಿಂದ ಕೂಡಿತ್ತು.
ಬಿಷಪ್ ಸೇರಿದಂತೆ ಆಯಾ ಧರ್ಮ ಗುರುಗಳು ಚರ್ಚ್ಗಳಲ್ಲಿ ವಿಶೇಷ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಳೆದ ಬಾರಿಗೆ ಹೊಲಿಸದರೆ ಜಿಲ್ಲೆಯಲ್ಲಿ ಈ ಬಾರಿ ಸರಳವಾದ ಕ್ರಿಸ್‍ಮಸ್ ಸಂಭ್ರಮ ಕಂಡು ಬಂದಿತು.