ಬಂಟ್ವಾಳ: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ, ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೇಗಿನಪೇಟೆಯಲ್ಲಿ ನಡೆದಿದೆ.
ಘಟನೆಯಲ್ಲಿ ಲಲಿತಾ (45) ಎಂಬುವವರು ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಬೆಳಗ್ಗಿನ ಜಾವ ಕಳ್ಳರು ಲಲಿತಾ ಮನೆಯ ಮುಂಬಾಗಿಲು ಮೂಲಕ ಒಳ ನುಗ್ಗಿದ್ದಾರೆ. ನಂತರ ಲಲಿತಾ ಅವರ ಕೈ, ಕಾಲು ಕಟ್ಟು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಬಾಗಿಲಿಗೆ ಬೀಗ ಹಾಕಿ ಪರಾರಿ ಆಗಿದ್ದಾಗಿ ಹೇಳಲಾಗಿದೆ.
ಸುತ್ತಮುತ್ತ ಹಲವು ಮನೆಗಳಿದ್ದರೂ ಜೋರು ಮಳೆಯಿಂದ ಕಾರಣ ಈ ಕೃತ್ಯ ಯಾರ ಗಮನಕ್ಕೂ ಬಂದಿಲ್ಲ. ಕೆಲ ಹೊತ್ತಿನ ಬಳಿಕ ಮಹಿಳೆ ಹಿಂಬಾಗಿಲಿನಿಂದ ಬೊಬ್ಬೆ ಹೊಡೆಯುತ್ತಾ ಹೊರಗಡೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯ ಮುಖ ಮತ್ತು ಎದೆ ಭಾಗದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾರಾರಿ ಆದವ ಯಾವುದೇ ಆಭರಣಗಳನ್ನು ಕದ್ದೊಯ್ಯಲಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ದರೋಡೆ ಯತ್ನ ಪ್ರಕರಣ ದಾಖಲಿಸಗಿದೆ.