- ಮನೆಯಿಂದ ಜಕ್ಕೂರ್ ಗೆ ತೆರಳಲಿರುವ ಎಸ್ ಎಂಕೆ ಕುಟುಂಬಸ್ಥರು
- ಬಳಿಕ ಅಲ್ಲಿಂದ ಚಾಪರ್ ಮುಖಾಂತರ ಚಿಕ್ಕಮಗಳೂರಿಗೆ ತೆರಳುವ ಸಾಧ್ಯತೆ
- ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಿಧನ ಹಿನ್ನಲೆ
- ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲು ನಿರ್ಧಾರ
- ಕಾಫಿ ವ್ಯಾಪಾರಸ್ಥರ ಸಂಘದಿಂದ ತುರ್ತು ಸಭೆ
- ಚಿಕ್ಕಮಗಳೂರು ಕ್ಲಬ್ ನಲ್ಲಿ ತುರ್ತು ಸಭೆ ನಡೆಸುತ್ತಿರುವ ಕಾಫಿ ಬೆಳೆಗಾರರು
- ಕಾಫಿ ಮಾರುಕಟ್ಟೆಯ ಎಲ್ಲಾ ಚಟುವಟಿಕೆಗಳು ಬಂದ್
- ನಗರದಲ್ಲಿ ಅಂಗಡಿ ಮುಂಗಟ್ಟು ಗಳು ತೆರೆಯದಂತೆ ಮನವಿ ಮಾಡಲಿರುವ ಬೆಳೆಗಾರರು.
- ಇಂದು ಚಿಕ್ಕಮಗಳೂರು ನಗರ ಬಂದ್ ಆಗುವ ಸಾಧ್ಯತೆ
- ಎಸ್ ಎಂ ಕೃಷ್ಣ ಮನೆಗೆ ಆರ್ ವಿ ದೇವರಾಜ್ ಆಗಮನ
- ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
- ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
- ದುಖಃತಪ್ತರಾಗಿರುವ ಕುಟುಂಬಸ್ಥರು
- ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
- ಮೃತ ದೇಹವನ್ನ ಬೆಂಗಳೂರಿಗೆ ತರಬೇಕಾ ಬೇಡ್ವಾ ಅನ್ನೊಬಗ್ಗೆ ಚರ್ಚೆ
- ಮಾಜಿ ಸಿಎಂ ಎಸ್ ಎಮ್‌ಕೆ ನಿವಾಸದಲ್ಲಿ ನೀರವ ಮೌನ
- ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
- ಶಾಸಕ ಯು.ಟಿ ಖಾದರ್ ಮಾತು
- ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
- ವಿಷಯ ಗೊತ್ತಾಗ್ತಿದ್ದಂತೆ ದುಖಃತಪ್ತರಾಗಿರುವ ಕುಟುಂಬಸ್ಥರು
- ಆತಂಕದಲ್ಲಿರೋ ಎಸ್ ಎಮ್ ಕೆ ಪತ್ನಿ
- ಮೃತದೇಹ ಚಿಕ್ಕಮಗಳೂರು ಅಥವಾ ಬೆಂಗಳೂರಿಗೆ ತರೋದರ ಬಗ್ಗೆ ಚರ್ಚೆ
- ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ
- ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
- ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
- ಮೃತ ದೇಹ ಸಂಜೆ ಬರುವ ಸಾಧ್ಯತೆ
- ವೆನ್ಲಾಕ್ ಆಸ್ಪತ್ರೆಗೆ ಮೃತದೇಹ ರವಾನೆ
- ಉದ್ಯಮಿ ಸಿದ್ದಾರ್ಥ್ ಸಾವು ಹಿನ್ನೆಲೆ
- ತೀವ್ರ ಆತಂಕಕ್ಕೊಳಗಾಗಿರೋ ಮಾಜಿ ಸಿಎಂ ಎಸ್ ಎಮ್ ಕೃಷ್ಣರಿಗೆ ಜ್ವರ
- ಕುಟುಂಬದ ವೈದ್ಯರನ್ನ ಕರೆಸಿ ಚಿಕಿತ್ಸೆ ಪಡೆದಿರೋ ಎಸ್ ಎಮ್ ಕೆ
- ಪೊಲೀಸ್ ಮತ್ತು ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿ ನದಿಯ ಸುತ್ತಾ ಅಲರ್ಟ್ ಬಗ್ಗೆ ಕೂಡಾ ಮಾಹಿತಿ
- ಅನಾರೋಗ್ಯ ಹಿನ್ನಲೆ ಸದ್ಯ ಮನೆಯಲ್ಲಿ ನಿದ್ರೆಯಲ್ಲಿರೋ ಎಸ್ ಎಮ್ ಕೆ
- ಮನೆಯಲ್ಲಿ ಎಸ್ ಎಮ್ ಕೆ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಸಂಬಂಧಿಕರು ಇದ್ದಾರೆ
ಮಂಗಳೂರು: ಜುಲೈ 29 ರ ರಾತ್ರಿಯಿಂದ ನಾಪತ್ತೆಯಾಗಿದ್ದ ಎಸ್ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ. ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಮೃತದೇಹ ಸಿಕ್ಕಿದೆ.
ಮಂಗಳೂರಿನ ಹೊಯಿಗೆ ಬಜಾರ್ನಲ್ಲಿ ಸಿದ್ಧಾರ್ಥ್ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಶವವನ್ನು ಗುರುತಿಸಿದ ಮೀನುಗಾರರು ದಡಕ್ಕೆ ತಂದಿದ್ದಾರೆ. ಸದ್ಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.
ಸಿದ್ಧಾರ್ಥ್ ಅವರು ಬದುಕಿಬರಬಹುದೆಂದು ಕಾಯುತ್ತಿದ್ದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿಯಲ್ಲಿರುವ ಅವರ ಕುಟುಂಬ ವರ್ಗವು ಸದ್ಯ ಶೋಕ ಸಾಗರದಲ್ಲಿ ಮುಳುಗಿದೆ.
ಕೆಫೆ ಕಾಫಿ ಡೇ ಸಂಸ್ಥೆಯ ನಷ್ಟದಿಂದಾಗಿ ನೊಂದಿದ್ದ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಡಿಜಿ ತಮಗೆ ಕಿರುಕುಳ ನೀಡಿದ್ದರು ಎಂದು ಸಿದ್ಧಾರ್ಥ್ ಅವರು ಬರೆದಿದ್ದರೆನ್ನಲಾದ ಪತ್ರವೊಂದು ವೈರಲ್ ಆಗಿತ್ತು.
ಜುಲೈ 29 ರಿಂದ ನಾಪತ್ತೆಯಾಗಿದ್ದ ಎಸ್ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.