ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯದ ಶೇಷಕುಟೀರ ವಸತಿ ಗೃಹದ ಮುಂದೆ ರಸ್ತೆಯಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿಯೊಂದು ಪತ್ತೆಯಾಗಿತ್ತು. ಹೀಗಾಗಿ, ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್ ಅವರು ಸ್ಥಳೀಯರೊಂದಿಗೆ ಸೇರಿ ಹೋರಿಯ ರಕ್ಷಣೆ ಮಾಡಿದ್ದಾರೆ.
ಗಾಯಗೊಂಡು ಬಿದ್ದ ಹೋರಿಯನ್ನು ರಕ್ಷಿಸಿದ ಕುಕ್ಕೆ ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್.. ರಾತ್ರಿ ಯಾರೋ ಅಕ್ರಮ ಸಾಗಾಟ ಮಾಡುವಾಗ ವಾಹನದಿಂದ ಬಿದ್ದಿರುವ ಅಥವಾ ಕೈ-ಕಾಲು ಕಟ್ಟಿ ಸಾಗಾಟ ಮಾಡಲು ಯತ್ನಿಸಿದಾಗ ಯಾರನ್ನೋ ನೋಡಿ ಕಳ್ಳರು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಹೋರಿಯ ಒಂದು ಕಾಲು ಮುರಿತಕ್ಕೊಳಗಾಗಿದೆ.
ಪಶು ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ ಅವರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸ ವಿಲೇವಾರಿ ಘಟಕದ ಕಟ್ಟಡದಲ್ಲಿ ಹೋರಿಗೆ ಪ್ರಸ್ತುತ ಆಶ್ರಯ ಕಲ್ಪಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್ ಅವರು ಇಲಾಖಾ ಯೂನಿಫಾರ್ಮ್ನಲ್ಲಿದ್ದರೂ ಗಾಯಗೊಂಡು ಬಿದ್ದ ಹೋರಿ ರಕ್ಷಿಸಿದ್ದಾರೆ. ಹೀಗಾಗಿ, ಸಾರ್ವಜನಿಕರು ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಓದಿ:ಮೈಸೂರು ಅತ್ಯಾಚಾರ ಪ್ರಕರಣ ಚರ್ಚೆ ವೇಳೆ ನಡೆಯಿತು ಸಿದ್ದರಾಮಯ್ಯರ ಪಂಚೆ ಪ್ರಸಂಗ!