ಸುಳ್ಯ:ಸುಳ್ಯದಲ್ಲಿ ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸುವ ಬದಲು ಮಾಸ್ಕ್ ನೀಡುವ ಮೂಲಕ ಸುಳ್ಯ ಎಸ್ಐ ಹರೀಶ್ ಎಂ.ಆರ್. ಅವರು ಮಾದರಿಯಾಗಿದ್ದಾರೆ.
ದಂಡ ಹಾಕುವ ಬದಲು ಮಾಸ್ಕ್ ಕೊಟ್ಟು ಜಾಗೃತಿ ಮೂಡಿಸಿದ ಸುಳ್ಯ ಎಸ್ಐ - Sulya latest news
ಸುಳ್ಯದಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಲು ಮುಂದಾದ ಪೊಲೀಸರು ದಂಡ ವಿಧಿಸುವ ಬದಲಾಗಿ ಮಾಸ್ಕ್ ನೀಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ಕೊರೊನಾ ಬಂದಾಗಿನಿಂದ ಪ್ರತಿಯೊಬ್ಬರಿಗೂ ಮಾಸ್ಕ್ ಹಾಕುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಪೊಲೀಸರು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಕೆಲಸವನ್ನು ಪೊಲೀಸರು ಮಾಡುತ್ತಲೇ ಇದ್ದಾರೆ. ಆದರೂ ಜನರು ಮಾತ್ರ ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇಂದು ಸುಳ್ಯದಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಲು ಮುಂದಾದ ಪೊಲೀಸರು ದಂಡ ವಿಧಿಸುವ ಬದಲಾಗಿ ಮಾಸ್ಕ್ ನೀಡುವ ಮೂಲಕ ಜಾಗೃತಿಯನ್ನು ಮೂಡಿಸಲು ಮುಂದಾಗಿದ್ದಾರೆ.
ಸುಳ್ಯದಲ್ಲಿ ಬೆಳಗ್ಗೆ ಸಮಯದಲ್ಲಿ ಬಹುತೇಕ ವಲಸೆ ಕಾರ್ಮಿಕರು ಮಾಸ್ಕ್ ಧರಿಸದೇ ಓಡಾಡುವ ದೃಶ್ಯಗಳು ಕಂಡುಬಂದಿದ್ದು, ಇದನ್ನು ಗಮನಿಸಿದ ಸುಳ್ಯ ಎಸ್ಐ ಹರೀಶ್ ಅವರು ಇಂತಹ ಜನರನ್ನು ಕರೆಸಿ ಅವರಿಗೆ ಮಾಸ್ಕ್ ಹಾಕಿ ಕೊರೊನಾ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.