ಕರ್ನಾಟಕ

karnataka

ETV Bharat / state

ಪ್ರತಿಭಾ ಕುಳಾಯಿ ಅವಹೇಳನ ಪ್ರಕರಣ: ಶ್ಯಾಮ ಸುದರ್ಶನ ಭಟ್​​ಗೆ ನಿರೀಕ್ಷಣಾ ಜಾಮೀನು - ಕೆಪಿಸಿಸಿ ಮುಖಂಡೆ ಪ್ರತಿಭಾ ಕುಳಾಯಿ ಪೊಟೋಗೆ ಕಮೆಂಟ್

ಕೆಪಿಸಿಸಿ ಮುಖಂಡೆ ಪ್ರತಿಭಾ ಕುಳಾಯಿ ಫೋಟೋಗೆ ಕಮೆಂಟ್ ಮಾಡಿದ ಆರೋಪಿ ಶ್ಯಾಮ ಸುದರ್ಶನ ಭಟ್​ಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ.

shyam-sudarshan-bhat-granted-anticipatory-bail-in-pratibha-kulai-defamation-case
ಪ್ರತಿಭಾ ಕುಳಾಯಿಗೆ ಅವಹೇಳನ ಪ್ರಕರಣ: ಶ್ಯಾಮ ಸುದರ್ಶನ ಭಟ್​​ಗೆ ನಿರೀಕ್ಷಣಾ ಜಾಮೀನು

By

Published : Nov 5, 2022, 4:26 PM IST

ಮಂಗಳೂರು:ಕೆಪಿಸಿಸಿ ಮುಖಂಡೆ ಪ್ರತಿಭಾ ಕುಳಾಯಿ ಅವರು ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ತೆಗೆದ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪಿ, ಖಾಸಗಿ ವೆಬ್​​ಸೈಟ್​​​ನ ಸಂಪಾದಕ ಶ್ಯಾಮ ಸುದರ್ಶನ ಭಟ್‌ ಅವರಿಗೆ ನ್ಯಾಯಾಲಯವು ನ.9ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ.

ಸೆ. 28ರಂದು ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಕೆ ಆರ್ ಶೆಟ್ಟಿ ಎಂಬಾತ ಫೇಸ್​​ಬುಕ್ ಪೋಸ್ಟ್ ಮಾಡಿದ್ದ. ಇದಕ್ಕೆ ಶ್ಯಾಮ ಸುದರ್ಶನ ಭಟ್ ಅವಹೇಳನಕಾರಿ ಕಮೆಂಟ್ ಹಾಕಿದ್ದರು. ಈ ಬಗ್ಗೆ ಪ್ರತಿಭಾ ಕುಳಾಯಿ ಅವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕೆ.ಆರ್. ಶೆಟ್ಟಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಇದುವರೆಗೂ ಶ್ಯಾಮ ಸುದರ್ಶನ ಭಟ್ ತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಇನ್ನೂ ಪತ್ತೆ ಸಾಧ್ಯವಾಗಿರಲಿಲ್ಲ.

ಆರೋಪಿ ಪರ ವಕೀಲರು ಸೆಷನ್ಸ್ ಕೋರ್ಟ್​​ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯವು ನ.9ರವರೆಗೆ ಆರೋಪಿ ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡಿದೆ.

ಇದನ್ನೂ ಓದಿ:ಪ್ರತಿಭಾ ಕುಳಾಯಿ ನಿಂದಿಸಿ ಫೇಸ್ ಬುಕ್ ಪೋಸ್ಟ್ : ನ್ಯಾಯಾಲಯದ ಮುಂದೆ ಶರಣಾದ ಕೆ ಆರ್ ಶೆಟ್ಟಿ

ABOUT THE AUTHOR

...view details