ಕರ್ನಾಟಕ

karnataka

ETV Bharat / state

ಮತ್ತೊಮ್ಮೆ ತಮ್ಮದೇ ದಾಖಲೆ ಮುರಿದ 'ಕಂಬಳ ವೀರ' ಶ್ರೀನಿವಾಸ ಗೌಡ - ಬಂಟ್ವಾಳದ ಕಕ್ಯಪದವು ಮೈರಾ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ

ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು ತಾನು ಮಾಡಿದ ದಾಖಲೆಯನ್ನು ಮತ್ತೆ ಮುರಿದು ಮತ್ತೊಂದು ಸಾಧನೆ ಮಾಡಿದ್ದಾರೆ.

shrinivas gowda
ಶ್ರೀನಿವಾಸ ಗೌಡ

By

Published : Mar 29, 2021, 6:33 AM IST

ಮಂಗಳೂರು: 'ಕಂಬಳವೀರ' ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರು ಕಂಬಳ ಓಟದಲ್ಲಿ ಇಂದು ತಮ್ಮದೇ ದಾಖಲೆಯನ್ನು ಮತ್ತೆ ಮುರಿದು ಹೊಸ ದಾಖಲೆ ಬರೆದಿದ್ದಾರೆ.

ಬಂಟ್ವಾಳದ ಕಕ್ಯಪದವು ಮೈರಾ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ 100 ಮೀ.ನಲ್ಲಿ ತಮ್ಮದೇ ಹೆಸರಿನಲ್ಲಿದ್ದ 8.96 ಸೆಕೆಂಡ್‌ಗಳ ದಾಖಲೆಯನ್ನು ಮುರಿದು 8.78 ಸೆಕೆಂಡ್‌ಗಳ ಹೊಸ ದಾಖಲೆ ಬರೆದಿದ್ದಾರೆ.

ಇದನ್ನು ಓದಿ: ಕಂಬಳ ಓಟದಲ್ಲಿ ಹೊಸ ದಾಖಲೆ ಬರೆದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ

ಕಳೆದ ವಾರ ಬೆಳ್ತಂಗಡಿಯ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 100 ಮೀ. ದೂರವನ್ನ ಕೇವಲ 8.96 ಸೆಕೆಂಡ್‌ಗಳಲ್ಲಿ ಓಡುವ ಮೂಲಕ ದಾಖಲೆ ಬರೆದಿದ್ದರು.

ಭಾನುವಾರ ಮೈರಾದಲ್ಲಿ ನಡೆದ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಅವರು ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿಯವರ ಕೋಣಗಳನ್ನು ಓಡಿಸಿ 100 ಮೀ. ದೂರವನ್ನ ಕೇವಲ 8.78 ಸೆಕೆಂಡ್ ನಲ್ಲಿ ಓಡಿಸಿ ಹೊಸ ದಾಖಲೆಯನ್ನ ಮತ್ತೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೂಲಕ ಈ ಹಿಂದೆ ತಮ್ಮದೇ ಹೆಸರಲ್ಲಿ ಇದ್ದ ದಾಖಲೆಯನ್ನ ಮತ್ತೊಮ್ಮೆ ಪುಡಿಗಟ್ಟಿದ್ದಾರೆ.

ABOUT THE AUTHOR

...view details