ಕರ್ನಾಟಕ

karnataka

ETV Bharat / state

ಬೆಳ್ತಂಗಡಿ ಜನತೆಯ ತುರ್ತು ನೆರವಿಗೆ 'ಶ್ರಮಿಕ ಸ್ಪಂದನಾ' ಕೇಂದ್ರ ಕಾರ್ಯಾರಂಭ - MLA Harish Poonja

ಬೆಳ್ತಂಗಡಿ ತಾಲೂಕಿನ ಜನತೆಗೆ ನೆರವಾಗುವ ದೃಷ್ಟಿಯಿಂದ ಕೋವಿಡ್-19 'ಶ್ರಮಿಕ ಸ್ಪಂದನಾ' ಕೇಂದ್ರ ಎಂಬ ವಾರ್ ರೂಮ್ ತೆರೆಯಲಾಗಿದೆ.

Belthangady
ಬೆಳ್ತಂಗಡಿ ಜನತೆಯ ತುರ್ತು ನೆರವಿಗೆ 'ಶ್ರಮಿಕ ಸ್ಪಂದನಾ' ಕೇಂದ್ರ ಕಾರ್ಯಾರಂಭ

By

Published : May 6, 2021, 9:57 AM IST

ಬೆಳ್ತಂಗಡಿ (ದಕ್ಷಿಣ ಕನ್ನಡ):ತಾಲೂಕಿನ ಜನತೆಗೆ ನೆರವಾಗುವ ದೃಷ್ಟಿಯಿಂದ ಸೇವಾ ಭಾರತಿ ಜೊತೆಗೂಡಿ ಕೋವಿಡ್-19 ಶ್ರಮಿಕ ಸ್ಪಂದನಾ ಕೇಂದ್ರ ಎಂಬ ವಾರ್ ರೂಮ್ ತೆರೆಯಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ತಾಲೂಕಿನ ಜನತೆ ಅಗತ್ಯ ನೆರವು ಪಡೆಯಬಹುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಬೆಳ್ತಂಗಡಿ ಜನತೆಯ ತುರ್ತು ನೆರವಿಗೆ 'ಶ್ರಮಿಕ ಸ್ಪಂದನಾ' ಕೇಂದ್ರ ಕಾರ್ಯಾರಂಭ

ಉಜಿರೆಯ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಸೇವಾ ಭಾರತಿ ಮೂಲಕ ನಡೆಯುವ ವಾರ್ ರೂಮ್ ಸೇವಾ ಕಾರ್ಯಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕೋವಿಡ್-19 ತುರ್ತು ಸೇವಾ ಸಹಾಯವಾಣಿ ಮೂಲಕ ಕೋವಿಡ್ ಸೇವಾ ತಂಡವನ್ನು ಸಂಪರ್ಕಿಸಬಹುದಾಗಿದ್ದು, ಇದಕ್ಕಾಗಿ ಸ್ವಯಂಸೇವಕರನ್ನು ನೇಮಿಸಲಾಗಿದೆ. ಇದರಲ್ಲಿ ಸಹಾಯವಾಣಿ, ಆಸ್ಪತ್ರೆ ಮಾಹಿತಿ, ಆಯುಷ್ಮಾನ್ ಮಾಹಿತಿ, ಆ್ಯಂಬುಲೆನ್ಸ್, ವ್ಯಾಕ್ಸಿನೇಷನ್ ಸೇರಿದಂತೆ ಪ್ರತಿಯೊಂದರ ಮಾಹಿತಿ ಲಭ್ಯವಾಗಲಿದೆ ಎಂದರು.

ಇದೇ ವೇಳೆ ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಿ, ಸೇವಾ ಚಟುವಟಿಕೆಯ ಕುರಿತು ಸಲಹೆ ನೀಡಿದರು.

ಇದನ್ನೂ ಓದಿ:ಲೈಫ್​ಲೈನ್ ಆಸ್ಪತ್ರೆಯಲ್ಲಿ ಐವರು ಸಾವು: ಪ್ರಕರಣದ ವರದಿ ನೀಡಲು ವಿಚಾರಣಾಧಿಕಾರಿಗಳ ನೇಮಕ

ABOUT THE AUTHOR

...view details