ಬಂಟ್ವಾಳ(ದಕ್ಷಿಣ ಕನ್ನಡ):ಸಚಿವ ಡಾ. ಕೆ.ಸಿ.ನಾರಾಯಣಗೌಡ ಇಂದು ಬಂಟ್ವಾಳ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲದಲ್ಲಿರುವ ಚಾರ್ಲ್ಸ್‌ಬಾಗ್ ನಿವಾಸಕ್ಕೆ ಭೇಟಿ ನೀಡಿ ಕೃಷಿಯಲ್ಲಿ ಸಾಧನೆ ಮಾಡಿ ಇತ್ತೀಚೆಗೆ ಸ್ವರ್ಗಸ್ಥರಾದ ಚಾರ್ಲ್ಸ್ ವಿ. ಫ್ರಾಂಕ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕೃಷಿ ಸಾಧಕ ಚಾರ್ಲ್ಸ್ ವಿ. ಫ್ರಾಂಕ್‌ಗೆ ಸಚಿವ ನಾರಾಯಣಗೌಡ ಶ್ರದ್ಧಾಂಜಲಿ - Minister K C Narayana Gowda
ಇಂದು ಬಂಟ್ವಾಳ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲದಲ್ಲಿರುವ ಚಾರ್ಲ್ಸ್‌ಬಾಗ್ ನಿವಾಸಕ್ಕೆ ಸಚಿವ ಡಾ. ಕೆ.ಸಿ.ನಾರಾಯಣಗೌಡ ಭೇಟಿ ನೀಡಿ ಕೃಷಿಯಲ್ಲಿ ಸಾಧನೆ ಮಾಡಿ ಇತ್ತೀಚೆಗೆ ಸ್ವರ್ಗಸ್ಥರಾದ ಚಾರ್ಲ್ಸ್ ವಿ. ಫ್ರಾಂಕ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕೃಷಿ ಸಾಧಕ ಚಾರ್ಲ್ಸ್ ವಿ. ಫ್ರಾಂಕ್‌ಗೆ ಸಚಿವ ಡಾ. ಕೆ. ಸಿ ನಾರಾಯಣ ಗೌಡ ಶ್ರದ್ಧಾಂಜಲಿ ಅರ್ಪಣೆ
ಪ್ರಗತಿಪರ ಕೃಷಿಕ, ಪಶುಸಂಗೋಪಕ ಹಾಗೂ ಸಮಾಜಮುಖಿ ಚಾರ್ಲ್ಸ್ ಫ್ರಾಂಕ್ ನಿಧನರಾಗಿದ್ದು, ಸಚಿವರು ಅವರ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ನುಡಿ ನಮನ ಅರ್ಪಿಸಿದರು. ಈ ವೇಳೆ ಮೃತರ ಪತ್ನಿಇ.ಲತೀಷಿಯಾ ಚಾರ್ಲ್ಸ್ ಫ್ರಾಂಕ್ ಅವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಪತ್ರಕರ್ತ ಆರೀಫ್ಗೆ ಸಚಿವರು ವಿಶೇಷವಾಗಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವೋದ್ಯಮಿ ರಾಜೇಶ್ ರೋಡ್ರಿಗಸ್, ರೋಬರ್ಟ್ ಡಿಸೋಜಾ (ರೂಪಾ ಟ್ರಾವೆಲ್ಸ್), ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಿವೈಎಸ್‌ಪಿ ವಲೈಂಟಾಯ್ನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.