ಕರ್ನಾಟಕ

karnataka

ETV Bharat / state

ಲೋಕಲ್ ಬ್ರಾಂಡ್​​​ ಟಿವಿ ಸಿದ್ದಪಡಿಸಿ ಮನೆಮಾತು: ಟಿವಿ ಮೆಕಾನಿಕ್ ಸತ್ಯ ಶಂಕರ್ ಸಾಧನೆ

ಆತ್ಮನಿರ್ಭರತೆ ಪ್ರದರ್ಶಿಸುವ ಮೂಲಕ ಪುತ್ತೂರಿನಲ್ಲಿ ಸತ್ಯ ಶಂಕರ್​ ಎಂಬ ಟಿವಿ ಮೆಕಾನಿಕ್ ​ತಮ್ಮ ಲೋಕಲ್​ ಬ್ರಾಂಡ್​ನ ಎಸ್.ಟಿ.ವಿ.ಸಿ ಟಿವಿ ಸಿದ್ದಪಡಿಸಿದ್ದಾರೆ - ದಕ್ಷಿಣಕನ್ನಡದ ಹವಾಮಾನಕ್ಕೆ ಹೊಂದಿಕೊಂಡಿರುವ ರೀತಿಯಲ್ಲಿ ಈ ಟಿವಿ ಆವಿಷ್ಕಾರಗೊಂಡಿದೆ - ವಿದ್ಯುತ್ ಸಂಪರ್ಕದಲ್ಲಿ ಆಗುವ ಓಲ್ಟೇಜ್ ಫ್ಲಕ್ಚುವೇಶನ್​ ಸಮಯದಲ್ಲಿ ಟಿವಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

Satya Shankar is a TV mechanic
ಸತ್ಯ ಶಂಕರ್​ ಟಿವಿ ಮೆಕಾನಿಕ್

By

Published : Jan 10, 2023, 10:50 PM IST

ಪುತ್ತೂರಿನಲ್ಲಿ ಸತ್ಯ ಶಂಕರ್​ ಎಂಬ ಟಿವಿ ಮೆಕಾನಿಕ್ ​ತಮ್ಮ ಲೋಕಲ್​ ಬ್ರಾಂಡಿನ ಎಸ್.ಟಿ.ವಿ.ಸಿ ಟಿವಿ ಸಿದ್ದಪಡಿಸಿದ್ದಾರೆ.

ಪುತ್ತೂರು(ದಕ್ಷಿಣ ಕನ್ನಡ) :ಸತ್ಯ ಶಂಕರ್​ ಎಂಬ ಟಿವಿ ಮೆಕಾನಿಕ್ ​ತಮ್ಮ ಲೋಕಲ್​ ಬ್ರಾಂಡಿನ ಎಸ್.ಟಿ.ವಿ.ಸಿ ಟಿವಿ ಸಿದ್ದಪಡಿಸಿ ಆತ್ಮನಿರ್ಭರ್​ ಪ್ರದರ್ಶಿಸುವ ಮೂಲಕ ಗ್ರಾಹಕರ ಗಮನ ಸೆಳೆದಿದ್ದಾರೆ. ಪುತ್ತೂರಿನಲ್ಲಿ ಕಳೆದ 22 ವರ್ಷಗಳಿಂದ ಟಿವಿ ರಿಪೇರಿಯಲ್ಲಿ ಅನುಭವಹೊಂದಿದ ಸತ್ಯ ಶಂಕರ್, ಟಿವಿ ಕ್ಲಿನಿಲ್ ಎನ್ನುವ ಸಂಸ್ಥೆ ಮಾಲೀಕರಾಗಿದ್ದು, ತನ್ನದೇ ಬ್ರ್ಯಾಂಡ್​ನ ಎಲ್.ಇ.ಡಿ ಸ್ಮಾರ್ಟ್ ಟಿವಿ ಹೊರ ತಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಲ್ಪನೆಯಂತೆ ಭಾರತ ಇಂದು ಆತ್ಮನಿರ್ಭರತೆಯತ್ತ ದಾಪುಗಾಲಿಡುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಆತ್ಮನಿರ್ಭರತೆ ಪ್ರದರ್ಶಿಸುವ ಮೂಲಕ ವಿಶ್ವದಲ್ಲೇ ಭಾರತ ಪ್ರಕಾಶಿಸಬೇಕೆನ್ನುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕನಸೂ ಆಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಹೊಸ ಹೊಸ ಆವಿಷ್ಕಾರಗಳು, ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹುದೇ ಒಂದು ಆವಿಷ್ಕಾರ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಾರುಕಟ್ಟೆಗೆ ಒಂದು‌ ಟಿವಿ ಬ್ರ್ಯಾಂಡ್ ಬಂದಿಳಿದಿದೆ.

ಎಸ್​ಟಿವಿಸಿ ಟಿವಿ ವಿಶೇಷತೆಗಳು: ಟಿವಿ ಕ್ಲಿನಿಕ್ ಸಂಸ್ಥೆ ಮಾಲೀಕರಾದ ಸತ್ಯ ಶಂಕರ್ ಟಿವಿ ದುರಸ್ತಿಯ ತಮ್ಮ ಅನುಭವವನ್ನು ಧಾರೆಯೆರೆದು ಈ ಅಪೂರ್ವ ಸಾಧನೆ ತೋರಿದ್ದಾರೆ. ಸಾಮಾನ್ಯವಾಗಿ ಎಲ್ಲ ಅಂತಾರಾಷ್ಟ್ರೀಯ ಮಟ್ಟದ ಬೇರೆ ಬೇರೆ ಟಿವಿ ಕಂಪನಿಗಳು ಮಾಡುವಂತೆ ಸ್ಮಾರ್ಟ್ ಟಿವಿಗೆ ಬೇಕಾದಂತಹ ಸ್ಲ್ರೀನ್ ,ಬೋರ್ಡ್, ಬ್ಯಾಕ್ ಲೈಟ್ ಮೊದಲಾದ ಬಿಡಿ ಭಾಗಗಳು ಫ್ಯಾಕ್ಟರಿಗಳಲ್ಲಿ ತಯಾರಾಗುತ್ತದೆ. ಈ ಬಿಡಿ ಭಾಗಗಳನ್ನು ಜೋಡಿಸಿ ಬೃಹತ್ ಟಿವಿ ಕಂಪನಿಗಳು ಅವರವರ ಬ್ಯಾಂಡ್ ಮಾಡಿಕೊಂಡು ಮಾರುಕಟ್ಟೆಗೆ ಟಿವಿಗಳನ್ನು ಬಿಡುಗಡೆ ಮಾಡುತ್ತವೆ.

ಇದೇ ರೀತಿಯಲ್ಲಿ ಸತ್ಯಶಂಕರ್ ತಮ್ಮದೇ ಆದ 26 ಇಂಚಿನ ಟಿವಿಯಿಂದ ಹಿಡಿದು 65 ಇಂಚಿನ ಎಸ್​ಟಿವಿಸಿ ಟಿವಿಗಳನ್ನು ಸಿದ್ಧಪಡಿಸಿದ್ದಾರೆ. ಈ ಟಿವಿಯನ್ನು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಪರಿವರ್ತನೆ ಮಾಡಿಕೊಡುವ ಆಪ್ಯ್​ ಅನ್ನೂ ನೀಡಿದ್ದಾರೆ. ಸ್ಕ್ರೀನ್, ಮದರ್ ಬೋರ್ಡ್ ಹೊರತುಪಡಿಸಿ ಎಚ್​​​ಡಿ ಇನ್​ ಪುಟ್, ಔಟ್ ಪುಟ್​ಗಳನ್ನು ಗ್ರಾಹಕರಿಗೆ ಬೇಕಾಗುವಷ್ಟು ಮಾಡಿಕೊಡುತ್ತಿದ್ದಾರೆ.

ಅಲ್ಲದೇ ಈ ಟಿವಿ ದಕ್ಷಿಣಕನ್ನಡದ ಹವಾಮಾನಕ್ಕೆ ಹೊಂದಿಕೊಂಡಿರುವ ರೀತಿಯಲ್ಲಿ ಸಿದ್ದಪಡಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ತೇವಾಂಶ ಹವಾಮಾನವನ್ನು ಹೊಂದಿರುವುದರಿಂದ ಬಹುತೇಕ ಕಂಪನಿಗಳ ಟಿವಿ ಹೆಚ್ಚಿನ ಕಾಲ ಬಾಳಿಕೆ ಬರುತ್ತಿಲ್ಲ. ಟಿವಿ ದುರಸ್ತಿಯ ಈ ಅನುಭವವನ್ನು ಪಡೆದುಕೊಂಡು ದಕ್ಷಿಣಕನ್ನಡ ಜಿಲ್ಲೆಯ ತೇವಾಂಶಕ್ಕೆ ಹೊಂದಿಕೊಳ್ಳುವ ಬೋರ್ಡ್​ಗಳನ್ನು ಈ ಟಿವಿಗಳಿಗೆ ಜೋಡಿಸಲಾಗಿದೆ.

ವಿದ್ಯುತ್ ಸಂಪರ್ಕದಲ್ಲಿ ಆಗುತ್ತಿರುವ ವೋಲ್ಟೇಜ್​ ಫ್ಲಕ್ಚುವೇಷನ್​ನಿಂದಾಗಿ ಬಹುತೇಕ ಟಿವಿಗಳಲ್ಲಿ ಸಮಸ್ಯೆಗಳು ಕಂಡುಬರುತ್ತಿವೆ. ಈ ಕಾರಣಕ್ಕಾಗಿ ಎಸ್.ಟಿ.ವಿ.ಸಿ ಟಿವಿಗಳಲ್ಲಿ ಇಂತಹ ಸಮಯದಲ್ಲಿ ಟಿವಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಲಾಗಿದೆ. ತಮ್ಮ ಬ್ರ್ಯಾಂಡ್​ನ ಈ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಈಗಾಗಲೇ ಸಿದ್ಧತೆ ನಡೆಸಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಬರುತ್ತಿದೆ ಎಂದು ಎಸ್​​ಟಿವಿಸಿ ಟಿವಿ ಮಾಲೀಕರಾದ ಸತ್ಯಶಂಕರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ವೇಳೆ, ತಮ್ಮ ಟಿವಿಯನ್ನು ಗ್ರಾಹಕರಿಗೆ ಹೆಚ್ಚಿನ ಹೊರೆ ಇಲ್ಲದೇ, ಕೈಗೆಟಕುವ ದರದಲ್ಲಿ ನೀಡಲಾಗುವುದು ಎಂದು ಸತ್ಯಶಂಕರ್ ತಿಳಿಸಿದರು. ಅಂತಾರಾಷ್ಟ್ರೀಯ ಮಟ್ಟದ ಟಿವಿಗಳಿಗೆ ಪೈಪೋಟಿ ನೀಡುವ ಟಿವಿ ಪುತ್ತೂರಿನಲ್ಲಿ ಸಿದ್ಧಗೊಂಡಿರುವುದಕ್ಕೆ ಗ್ರಾಹಕರಿಂದ ಭಾರೀ ಬೆಂಬಲವೂ ವ್ಯಕ್ತವಾಗಿದೆ. ಸತ್ಯಶಂಕರ್ ಅವರ ಈ ಸಾಧನೆ ಪುತ್ತೂರಿಗೆ ಹೆಮ್ಮೆ ತಂದಿದೆ ಎಂದು ಮಾತುಗಳೂ ಕೇಳಿ ಬರಲಾರಂಭಿಸಿವೆ. ಮತ್ತೊಂದೆಡೆ ಸತ್ಯಶಂಕರ್ ಅವರ ಈ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

ಇದನ್ನೂ ಓದಿ :ಮಹಿಳೆಯರ ರಕ್ಷಣೆಗಾಗಿ 'ಆ್ಯಂಟಿ ರೇಪ್ ಫುಟ್‌ವೇರ್' ಆವಿಷ್ಕಾರ: ಕಲಬುರಗಿ ಹೈಸ್ಕೂಲ್ ವಿದ್ಯಾರ್ಥಿನಿ ಸಾಧನೆ

ABOUT THE AUTHOR

...view details