ಉಳ್ಳಾಲ: ದೇರಳಕಟ್ಟೆ ಬಿಎಸ್ಎನ್ಎಲ್ ಉಪಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಚೇರಿಯೊಳಗಿದ್ದ ಪರಿಕರಗಳು ಸಂಪೂರ್ಣ ಸುಟ್ಟುಹೋಗಿವೆ.
ಖಾಸಗಿ ಕಟ್ಟಡದಲ್ಲಿರುವ ಬಿಎಸ್ಎಸ್ಎಲ್ ಸಂಸ್ಥೆಯ ದೇರಳಕಟ್ಟೆ ಉಪಕೇಂದ್ರದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸಂಸ್ಥೆಗೆ ಸುಮಾರು 4 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆಯಿಂದಾಗಿ ದೇರಳಕಟ್ಟೆ ಸಂಬಂಧಿಸಿದ ಬ್ಯಾಂಕ್, ಆಸ್ಪತ್ರೆಗಳಲ್ಲಿ ಸ್ಥಿರ ದೂರವಾಣಿ ಹಾಗೂ ಇಂಟರ್ನೆಟ್ ಸಮಸ್ಯೆ ಉಂಟಾಗಿದೆ. ಬಹುತೇಕ ಬ್ಯಾಂಕುಗಳ ಸರ್ವರ್ ಸಮಸ್ಯೆಯಿಂದಾಗಿ ಕಾರ್ಯನಿರ್ವಹಿಸದೇ ಗ್ರಾಹಕರು ತೊಂದರೆಗೀಡಾಗಿದ್ದಾರೆ.
ಬಿಎಸ್ಎನ್ಎಲ್ ಉಪಕೇಂದ್ರದಲ್ಲಿ ಬೆಂಕಿ ಅವಘಡ ಸರ್ವರ್ ರೂಂ ಕೋಣೆಯೊಳಗೆ ಸೂಕ್ತ ಕೂಲಿಂಗ್ ವ್ಯವಸ್ಥೆ ಇಲ್ಲದ ಕಾರಣ ಹಾಗೂ ರಾತ್ರಿ ವೇಳೆ ಸಿಬ್ಬಂದಿಯಿರದೆ ಇಲ್ಲದಿರುವುದರಿಂದ ಘಟನೆ ಸಂಭವಿಸಿರುವ ಸಾಧ್ಯತೆಯಿದೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.