ಸುಳ್ಯ: ಸ್ನಾನ ಮಾಡುವುದನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದು, ಇದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿ ಸ್ನಾನ ಮಾಡುವ ವಿಡಿಯೋ ಚಿತ್ರೀಕರಣ: ಪ್ರಕರಣ ದಾಖಲಿಸಿದ ಹುಡುಗಿ ತಂದೆ ಮೇಲೆ ಹಲ್ಲೆ
ಬಾಲಕಿಯು ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದು, ಈ ಸಮಯದಲ್ಲಿ ಬಾಲಕಿಯ ತಾಯಿ ಆರೋಪಿಯ ಮೊಬೈಲ್ನ್ನು ಎಳೆಯಲು ಪ್ರಯತ್ನಿಸಿದ್ದರು. ಆದರೆ, ಈ ವೇಳೆ ಆರೋಪಿಯು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ.
ಅಕ್ಟೋಬರ್ 26 ರಂದು ರಾತ್ರಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗಳು ಮನೆಯ ಸ್ನಾನದ ಕೊಠಡಿಯಲ್ಲಿರುವ ವೇಳೆ, ಸುಳ್ಯ ಕಲ್ಮಡ್ಕ ಗ್ರಾಮದ ನಿವಾಸಿ ಶ್ಯಾಮ್ ಎಂಬುವನು ಸ್ನಾನದ ಕೊಠಡಿಯ ಹಿಂಬದಿಗೆ ಬಂದು ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದ. ಈ ಸಮಯದಲ್ಲಿ ಬಾಲಕಿಯ ತಾಯಿ ಆರೋಪಿಯ ಮೊಬೈಲ್ನ್ನು ಎಳೆಯಲು ಪ್ರಯತ್ನಿಸಿದ್ದರು. ಆದರೆ, ಈ ವೇಳೆ ಆರೋಪಿಯು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ.
ಈ ಘಟನೆಯ ಬಗ್ಗೆ ಆರೋಪಿ ಶ್ಯಾಮ್ನ ತಂದೆಯ ಬಳಿ ಬಾಲಕಿಯ ಮನೆಯವರು ತಿಳಿಸಿದ್ದರು. ಈ ವಿಷಯವನ್ನು ತನ್ನ ತಂದೆಯಲ್ಲಿ ತಿಳಿಸಿದರೆಂಬ ದ್ವೇಷದಿಂದ ಶ್ಯಾಮ್ ಬಾಲಕಿಯ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ 2012 ಮತ್ತು ಕಲಂ 354(ಸಿ ) ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.