ಕರ್ನಾಟಕ

karnataka

ETV Bharat / state

ಶೋಭಾ ಕರಂದ್ಲಾಜೆ ಕೇಂದ್ರದ ಮೇಲಿನ ಸಿಟ್ಟನ್ನ ರಾಜ್ಯ ಸರ್ಕಾರದ ಮೇಲೆ ತೋರಿಸುತ್ತಿದ್ದಾರೆ: ಐವಾನ್​​​ ಡಿಸೋಜ - undefined

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಮಂತ್ರಿ ಸ್ಥಾನ ಸಿಗದೆ ಕೇಂದ್ರದ ಮೇಲಿರುವ ಸಿಟ್ಟನ್ನ ರಾಜ್ಯ ಸರ್ಕಾರದ ಮೇಲೆ ತೀರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದ್ದಾರೆ.

ಕೇಂದ್ರದ ಮೇಲಿರುವ ಸಿಟ್ಟನ್ನ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಮೇಲೆ ತೀರಿಸುತ್ತಿದ್ದಾರೆ: ಐವಾನ್​ ಡಿಸೋಜ

By

Published : Jun 13, 2019, 8:12 PM IST

ಮಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಮಂತ್ರಿ ಸ್ಥಾನ ಸಿಗದೆ ಕೇಂದ್ರದ ಮೇಲೆ ಆಕ್ರೋಶಗೊಂಡಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ಐವಾನ್​ ಡಿಸೋಜ

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಶವ ಪೆಟ್ಟಿಗೆಗೆ ಕೊನೆ ಮೊಳೆ, ಸರ್ಕಾರ ಸತ್ತಿದೆ ಎಂದು ಟೀಕೆ ಮಾಡಿದ್ದಾರೆ. ಅವರು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯದ ಬಗ್ಗೆ ತಿಳಿಯದೆ ಟೀಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಸಾಲಮನ್ನಾ, ಪಡಿತರ ಕಾರ್ಡ್ ಕಾರ್ಯದ ಪ್ರಗತಿ ಜೊತೆಗೆ ಇಡೀ ರಾಜ್ಯದ ಜನರ ಕಲ್ಯಾಣವನ್ನು ನೋಡಿಕೊಳ್ಳುತ್ತಿದೆ. ಅವರು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯದ ಬಗ್ಗೆ ತಿಳಿದುಕೊಳ್ಳದೇ ಇರುವುದು ಬೇಸರ ತಂದಿದೆ. ಆದುದರಿಂದ ಇಂತಹ ಹೇಳಿಕೆಗಳನ್ನು ನಿಲ್ಲಿಸಿ ಎಂದರು.

For All Latest Updates

TAGGED:

ABOUT THE AUTHOR

...view details