ಮಂಗಳೂರು:ಭಾರೀ ಭೂಕುಸಿತದ ಹಿನ್ನೆಲೆಯಲ್ಲಿ ಶಿರಾಡಿ ಘಾಟಿನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಗುಂಡ್ಯ ಪ್ರದೇಶದಲ್ಲಿ ಸಾವಿರಾರು ವಾಹನ ಚಾಲಕರು ಎಲ್ಲೂ ಹೋಗಲಾರದೇ ಸಂಕಷ್ಟಕ್ಕೊಳಗಾದ ಘಟನೆ ನಡೆದಿದೆ.
ಶಿರಾಡಿ ಘಾಟ್ ಬಂದ್: ಆ್ಯಂಬುಲೆನ್ಸ್ ಸಮೇತ ಸಾವಿರಾರು ವಾಹನ ಸಂಕಷ್ಟಕ್ಕೆ - ಆ್ಯಂಬುಲೆನ್ಸ್
ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ನಲ್ಲಿ ಪ್ರವಾಹ ಉಂಟಾಗಿ ವಾಹನ ಸಂಚಾರವನ್ನು ಸ್ಥಗಿತಗಳಿಸಿದ್ದು, ಗುಂಡ್ಯ ಪ್ರದೇಶದಲ್ಲಿ ಸಾವಿರಾರು ವಾಹನಗಳು ಸತತ ಮೂರು ಗಂಟೆಗಳ ಕಾಲ ಪರದಾಟ ನಡೆಸುವಂತಾಗಿದೆ.
ಶಿರಾಡಿ ಘಾಟ್ ಬಂದ್: ಆ್ಯಂಬುಲೆನ್ಸ್ ಸಮೇತ ಸಾವಿರಾರು ವಾಹನ ಸಂಕಷ್ಟಕ್ಕೆ
ಜೊತೆಗೆ ಆ್ಯಂಬುಲೆನ್ಸ್ ಕೂಡಾ ಮೂರು ಗಂಟೆಗಳಿಂದ ಈ ವಾಹನಗಳ ನಡುವೆ ಸಿಲುಕಿಹಾಕಿಕೊಂಡಿದ್ದು, ಊಟ, ನೀರು ಇಲ್ಲದೇ ಚಾಲಕರು ಪರದಾಡುವ ಹಾಗಾಗಿದೆ.
ಈ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಪೊಲೀಸರು ಪರಿಸ್ಥಿತಿ ಸುಧಾರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಯಾವ ಸುಧಾರಣೆಯೂ ಕಾಣುತ್ತಿಲ್ಲ. ಅಲ್ಲದೆ, ಬೇರೆ ವ್ಯವಸ್ಥೆ ಮಾಡಿ ಎಂದು ಚಾಲಕರು, ಪ್ರಯಾಣಿಕರು ಬೇಡುತ್ತಿದ್ದ ದೃಶ್ಯಗಳು ಸಾಮಾನ್ಯ ಎನ್ನುವಂತಾಗಿತ್ತು.