ಬಂಟ್ವಾಳ: ವಿಟ್ಲ ಕಸ್ಬಾ ಎಂಬಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ 12 ಕೆ.ಜಿ ತೂಕದ ರಕ್ತಚಂದನ ಮರದ ತುಂಡನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಕ್ತಚಂದನ ಮರದ ತುಂಡು ಸಾಗಾಟ: ಆರೋಪಿ ಬಂಧನ - bloodwood
ಪ್ಲಾಸ್ಟಿಕ್ ಚೀಲದಲ್ಲಿ ರಕ್ತಚಂದನ ಮರದ ತುಂಡನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ವಿಟ್ಲ ಪೊಲೀಸರು, 12 ಕೆ.ಜಿ ತೂಕದ ರಕ್ತಚಂದನವನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಬಂಧನ
ಪುತ್ತೂರು ಸವಣೂರು ಗ್ರಾಮದ ನಿವಾಸಿ ಅಬ್ಬು ಚಾಪಳ್ಳ ಯಾನೆ ಉಮ್ಮರ್ ಫಾರೂಕ್ ಬಂಧಿತ. 24,200 ಮೌಲ್ಯದ 12 ಕೆ.ಜಿ ತೂಕದ ರಕ್ತಚಂದನದ ತುಂಡನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಸಯ್ಯದ್ ಎಂಬಾತನಿಂದ ರಕ್ತಚಂದನ ಪಡೆದಿರುವುದಾಗಿ ವಿಚಾರಣೆಯಲ್ಲಿ ಆರೋಪಿ ತಿಳಿಸಿದ್ದಾನೆ.