ಮಂಗಳೂರು: ನಗರದ ಹೊರವಲಯದಲ್ಲಿರುವ ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್ಗೆ ಹಾನಿ ಮಾಡಿದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ತಡರಾತ್ರಿ ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಕಾರಿನಲ್ಲಿ ಬಂದ ಯುವಕರ ತಂಡವೊಂದು ಬ್ಯಾನರ್ ಹಾನಿಗೊಳಿಸಿದ್ದು, ಈ ವೇಳೆ 10ಕ್ಕೂ ಅಧಿಕ ಬ್ಯಾನರ್ ಗಳಿಗೆ ಹಾನಿ ಮಾಡಲಾಗಿದೆ ಎಂದು ತಿಳಿದುಬಂದಿದೆ.