ಕರ್ನಾಟಕ

karnataka

ETV Bharat / state

ಕೈ ಹಿಡಿದು ಎಳೆದ ಕಾಮುಕನಿಗೆ ಪೊಲೀಸ್​ ಠಾಣೆಗೆ ಎಳೆದೊಯ್ದ ವೀರ ವನಿತೆಯರು - ಲೈಂಗಿಕ ದೌರ್ಜನ್ಯವೆಸಗಿದ ಯುವಕನಿಗೆ ಕ್ಲಾಸ್ ನೀಡಿ ಪೊಲೀಸರಿಗೊಪ್ಪಿಸಿದ ವಿದ್ಯಾರ್ಥಿನಿಯರು

ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಯುವಕನೊಬ್ಬನನ್ನು ವಿದ್ಯಾರ್ಥಿನಿಯರು ಒಟ್ಟು ಸೇರಿ ಹಿಡಿದು  ಪೊಲೀಸರಿಗೆ ಒಪ್ಪಿಸಿದ್ದಾರೆ.

sexually-abused-young-man-arerst-by-mangalore-police
ಲೈಂಗಿಕ ದೌರ್ಜನ್ಯವೆಸಗಿದ ಯುವಕ

By

Published : Jan 6, 2020, 3:57 PM IST

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನೊಬ್ಬನನ್ನು ವಿದ್ಯಾರ್ಥಿನಿಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಟ್ವಾಳದ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಆರೋಪಿ ರೋಹಿತ್ ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಈತ ಅದೇ ಕಾಲೇಜಿನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. ಈತ ಶನಿವಾರ ವಿದ್ಯಾರ್ಥಿನಿಯೊಬ್ಬಳ ಕೈ ಹಿಡಿದು ಎಳೆದಿದ್ದು, ಆ ವಿಚಾರ ತಿಳಿದ ವಿದ್ಯಾರ್ಥಿನಿಯರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೈ ಹಿಡಿದು ಎಳೆದ ಕಾಮುಕನಿಗೆ ಪೊಲೀಸ್​ ಠಾಣೆಗೆ ಎಳೆದೊಯ್ದ ವೀರ ವನಿತೆಯರು

ಈತ ಈ ಹಿಂದೆ ಕಾಲೇಜಿನ ಹಲವು ವಿದ್ಯಾರ್ಥಿನಿಯರೊಟ್ಟಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ. ಪ್ರಾಂಶುಪಾಲರಿಗೆ ಈ ವಿಚಾರದ ಬಗ್ಗೆ ದೂರು ನೀಡಲಾಗಿದ್ದರೂ, ಅವರು ರಾಜಿ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ವಿದ್ಯಾರ್ಥಿನಿಯರು ಆರೋಪಿ ರೋಹಿತ್ ನನ್ನು ಪಟ್ಟು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details