ಕರ್ನಾಟಕ

karnataka

ETV Bharat / state

ಇನ್​​​ಸ್ಟಾದಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಬಾಲಕನ ವಿರುದ್ಧ ಪೋಕ್ಸೋ ಕೇಸು - sexual harrasment by a Minor boy in bantwal

ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನೋರ್ವ ಇನ್​​​ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

Etv sexual-harrasment-to-minor-girl-in-bantwal
ಇನ್​​​ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ : ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ

By

Published : Dec 8, 2022, 9:54 PM IST

ಬಂಟ್ವಾಳ (ದಕ್ಷಿಣ ಕನ್ನಡ): ಇನ್ನೂ ಹದಿನೆಂಟರ ಹರೆಯಕ್ಕೆ ಕಾಲಿಡದ ಬಾಲಕನೋರ್ವ ಇನ್​​​ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನಂತೆ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಹತ್ತನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತೆ ತನ್ನ ತಂದೆ ತಾಯಿ ಅಕ್ಕಳೊಂದಿಗೆ ಬಂಟ್ವಾಳದಲ್ಲಿ ವಾಸವಾಗಿದ್ದಳು. ಈ ಬಾಲಕಿಗೆ ಇನ್ಸ್ಸ್ಟಾಗ್ರಾಂನಲ್ಲಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನಿಗೆ ಪರಿಚಯವಾಗಿದೆ. ಪರಿಚಯ ಬಳಿಕ ಪ್ರಣಯಕ್ಕೆ ತಿರುಗಿದೆ. ಬಳಿಕ ಬಾಲಕ ಆಗಾಗ ಸಂತ್ರಸ್ತೆಯ ಮನೆಗೆ ಭೇಟಿ ಕೊಡುತ್ತಿದ್ದನು.

ಒಂದು ದಿನ ಬಾಲಕ ಸಂತ್ರಸ್ತೆಗೆ ಕರೆ ಮಾಡಿ ರಾತ್ರಿ ಸಂತ್ರಸ್ತೆಯ ಮನೆಗೆ ಬಂದಿದ್ದು, ಬಳಿಕ ಆಕೆ ಆತನ ಜೊತೆ ಸ್ಕೂಟರ್‌ನಲ್ಲಿ ತೆರಳಿದ್ದಾಳೆ. ಅಂದು ಬಾಲಕ ಸಂತ್ರಸ್ತೆಗೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಮನೆಗೆ ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಸಂತ್ರಸ್ತ ಬಾಲಕಿಯ ದೂರಿನಂತೆ, ಬಾಲಕನನ್ನು ಬಾಲನ್ಯಾಯ ಮಂಡಳಿಯ ಎದುರು ಹಾಜರುಪಡಿಸಿ, ರಿಮಾಂಡ್ ಹೋಂಗೆ ಆದೇಶಿಸಲಾಗಿದೆ.

ಇದನ್ನೂ ಓದಿ:9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬ್ಲೇಡ್‌ನಿಂದ ಕತ್ತು ಸೀಳಿ ಕೊಲೆ.. 15 ವರ್ಷದ ಬಾಲಕನ ಸೆರೆ

ABOUT THE AUTHOR

...view details