ಮಂಗಳೂರು : ಕೆಎಸ್ಆರ್ಟಿಸಿ ಬಸ್‌ನಲ್ಲಿ ಸಹಪ್ರಯಾಣಿಕಳಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಕನಾಡಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ವಾಜಿದ್ ಎ ಜಮಖಾನಿ ಬಂಧಿತ ಆರೋಪಿ.
ಕೆಎಸ್ಆರ್ಟಿಸಿ ಬಸ್‌ನಲ್ಲಿ ಯುವತಿಗೆ ಕಿರುಕುಳ : ಮಂಗಳೂರಿನಲ್ಲಿ ಆರೋಪಿ ಬಂಧನ - Sexual Harassment To young women accused arrested in Mangalore
ಇಂದು ಸುಳ್ಯದಿಂದ ಮಂಗಳೂರಿಗೆ ಯುವತಿಯೊಬ್ಬಳು ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈಕೆಯ ಪಕ್ಕದ ಸೀಟಿನಲ್ಲಿ ವಾಜಿದ್ ಎ ಜಮಖಾನಿ ಪ್ರಯಾಣಿಸುತ್ತಿದ್ದ..
ಆರೋಪಿ ಬಂಧನ
ಇಂದು ಸುಳ್ಯದಿಂದ ಮಂಗಳೂರಿಗೆ ಯುವತಿಯೊಬ್ಬಳು ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈಕೆಯ ಪಕ್ಕದ ಸೀಟಿನಲ್ಲಿ ವಾಜಿದ್ ಎ ಜಮಖಾನಿ ಪ್ರಯಾಣಿಸುತ್ತಿದ್ದ.
ಪ್ರಯಾಣದ ವೇಳೆ ಈತ ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿ ಮಾನಹಾನಿ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.