ಬಂಟ್ವಾಳ, ದಕ್ಷಿಣಕನ್ನಡ: ಸಂಬಂಧಿಕನಿಂದಲೇ ಯುವತಿ ಲೈಂಗಿಕ ಕಿರುಕುಳಕ್ಕೊಳಗಾದ ಘಟನೆ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ಸದ್ಯ ಯುವತಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಸಂಬಂಧಿಕರ ಮನೆಯಲ್ಲಿ ತಮ್ಮನೊಂದಿಗೆ ಆಶ್ರಯ ಪಡೆದಿದ್ದ ಯುವತಿಗೆ ಅದೇ ಮನೆಯ ಸದಸ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಯುವತಿ ತಮ್ಮ ಅಜ್ಜಿಯ ಜತೆ ವಾಸವಿದ್ದರು. ಅಜ್ಜಿ ನಿಧನದ ಬಳಿಕ ಯುವತಿ ಮತ್ತು ಆಕೆಯ ಸಹೋದರ ಇಬ್ಬರು ಅಜ್ಜಿಯ ಮನೆಯಲ್ಲಿ ತಂಗಿದ್ದರು. ಅಜ್ಜಿಯ ಮನೆಯಲ್ಲಿ ಇವರ ಜೊತೆ ಸಂಬಂಧಿಕನೊಬ್ಬನು ಸಹ ವಾಸವಿದ್ದನು. ಆರೋಪಿ ನಿರಂತರವಾಗಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಆದರೆ, ಯುವತಿ ಆರೋಗ್ಯದಲ್ಲಿ ಕೊಂಚ ನ್ಯೂನ್ಯತೆ ಇದ್ದ ಹಿನ್ನೆಲೆ ಈ ವಿಚಾರವನ್ನು ತಿಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಸಂಗತಿ ಬಗ್ಗೆ ಹೇಗೊ ಅಧಿಕಾರಿಗಳ ತಿಳಿದಿದ್ದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿಷಯ ಬೆಳಕಿಗೆ ಬಂದಿದೆ.