ಕರ್ನಾಟಕ

karnataka

ETV Bharat / state

ಪ್ರಿಯಕರನಿಂದಲೇ ಲೈಂಗಿಕ ದೌರ್ಜನ್ಯ: ವಿಟ್ಲ ಠಾಣೆಯಲ್ಲಿ ದೂರು - ಬಂಟ್ವಾಳ ಲೆಟೆಸ್ಟ್​ ಕ್ರೈಂ ನ್ಯೂಸ್​

ಪ್ರೀತಿಸುತ್ತಿದ್ದ ವ್ಯಕ್ತಿ ಗೆಳೆಯನ ಮನೆಯಲ್ಲಿ ಕೂಡಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಮಾಹಿತಿಯನ್ನು ಬೇರೆಯವರಿಗೆ ತಿಳಿಸಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ವಿಟ್ಲ ಠಾಣೆಗೆ ದೂರು ನೀಡಿದ್ದಾಳೆ.

Complaint at vitla Station
ಪ್ರಿಯಕರನಿಂದಲೇ ಲೈಂಗಿಕ ದೌರ್ಜನ್ಯ: ವಿಟ್ಲ ಠಾಣೆಯಲ್ಲಿ ದೂರು

By

Published : Jul 2, 2020, 8:25 AM IST

ಬಂಟ್ವಾಳ: ಪ್ರೀತಿಸುತ್ತಿದ್ದ ವ್ಯಕ್ತಿ ಗೆಳೆಯನ ಮನೆಯಲ್ಲಿ ಕೂಡಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಮಾಹಿತಿಯನ್ನು ಬೇರೆಯವರಿಗೆ ತಿಳಿಸಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಗೆ ಯುವತಿಯೊಬ್ಬಳು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.


ವಿಶ್ವನಾಥ ಪೂಜಾರಿ ಮತ್ತು ನಿತಿನ್ ಆರೋಪಿಗಳು. ಸಾಲೆತ್ತೂರು ಗ್ರಾಮದ ಯುವತಿಯನ್ನು ವಿಶ್ವನಾಥ ಪೂಜಾರಿ ಪ್ರೀತಿಸುತ್ತಿದ್ದ. ಆಕೆಯನ್ನು ಬೆದರಿಸಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ದು, ನಿತಿನ್ ಮನೆಯಲ್ಲಿ ಕೂಡಿಹಾಕಿದ್ದ. ಬಳಿಕ ಇಬ್ಬರೂ ಸೇರಿ ಲೈಂಗಿಕ ದೌರ್ಜನ್ಯ ನಡೆಸಿ, ಮಾನಸಿಕ ಹಿಂಸೆ ನೀಡಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details