ಸುಳ್ಯ (ದಕ್ಷಿಣ ಕನ್ನಡ):ಅಪ್ರಾಪ್ತೆಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಇದೀಗ ಆಕೆ ಗರ್ಭವತಿಯಾಗಲು ಕಾರಣನಾದ ವ್ಯಕ್ತಿಯನ್ನು ಸುಳ್ಯ ಪೋಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಅನಾಥೆ ಮೇಲೆ ಲೈಂಗಿಕ ದೌರ್ಜನ್ಯ: ಗರ್ಭಿಣಿಯಾದ ಬಾಲಕಿ, ವ್ಯಕ್ತಿ ಸೆರೆ - ಮಂಗಳೂರು ಅತ್ಯಾಚಾರ ಪ್ರಕರಣ
ಅಪ್ರಾಪ್ತೆಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಆಕೆ ಗರ್ಭವತಿಯಾಗಲು ಕಾರಣನಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಮುತ್ತಪ್ಪ ಬಂಧಿತ ಯುವಕ. ಕಳೆದ ಕೆಲ ವರ್ಷಗಳಿಂದ ಸುಳ್ಯದ ಕಲ್ಲುಮುಟ್ಲು ಎಂಬಲ್ಲಿ ಈತ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು. ಈ ವೇಳೆ 15 ವರ್ಷದ ಅನಾಥ ಹುಡುಗಿ ಈತನಿಗೆ ಪರಿಚಯವಾಗಿದ್ದಾಳೆ. ಬಳಿಕ ಒಂದು ವರ್ಷದಿಂದ ಇಬ್ಬರೂ ಜತೆಗೆ ವಾಸಿಸುತ್ತಿದ್ದರು. ಇದೀಗ ಹುಡುಗಿ ಗರ್ಭಿಣಿಯಾಗಿದ್ದು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಗೆ ವಿಷಯ ತಿಳಿದು ಅವರು ಸುಳ್ಯ ಸಿಡಿಪಿಒ ಅವರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಸಿಡಿಪಿಒರವರ ದೂರಿನ ಮೇರೆಗೆ ಪೋಲೀಸರು ಆ ಯುವಕನ್ನು ಬಂಧಿಸಿದ್ದು, ಅತ್ಯಾಚಾರ ಕೇಸು ದಾಖಲಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.