ಮಂಗಳೂರು:ಕರಾವಳಿಯಲ್ಲಿ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಸಮುದ್ರ ತೀವ್ರವಾಗಿ ಪ್ರಕ್ಷುಬ್ಧಗೊಂಡಿದೆ. ನಗರದ ಸಸಿಹಿತ್ಲು ಸಮೀಪದಲ್ಲಿ ಸಮುದ್ರದ ರಕ್ಕಸ ಗಾತ್ರದ ಅಲೆಗಳ ಆರ್ಭಟಕ್ಕೆ ರಸ್ತೆ ಸಂಪೂರ್ಣವಾಗಿ ಸಮುದ್ರ ಪಾಲಾಗಿವೆ.
ಉಳ್ಳಾಲದಲ್ಲಿ ತೀವ್ರ ಕಡಲ್ಕೊರೆತ..ಎಚ್ಚರಿಕೆಯಿಂದಿರಲು ಜಿಲ್ಲಾಡಳಿತದ ಸೂಚನೆ
ಕರಾವಳಿಯಲ್ಲಿ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಸಮುದ್ರ ತೀವ್ರವಾಗಿ ಪ್ರಕ್ಷುಬ್ಧಗೊಂಡಿದೆ. ಸಸಿಹಿತ್ಲು,ಉಳ್ಳಾಲ ಸಮುದ್ರದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಮೀನುಗಾರರು ಹಾಗೂ ಸಮುದ್ರ ತಟ ವಾಸಿಸುವ ಕುಟುಂಬಗಳಿಗೆ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಸಮುದ್ರ ವಿಹಾರಿಗಳಿಗೆ ಕುಳಿತುಕೊಳ್ಳಲು ಹಾಕಿರುವ 25 ಕುರ್ಚಿಗಳಲ್ಲಿ 15 ಕುರ್ಚಿಗಳು ಈಗಾಗಲೇ ಸಮುದ್ರದಲ್ಲಿ ತೇಲಿ ಹೋಗಿದ್ದು, ಒಂದು ಕೋಟಿ ರೂ. ವೆಚ್ಚದಲ್ಲಿ ಹಾಕಲಾಗಿರುವ ಕಡಲ್ಕೊರೆತ ತಡೆಗೋಡೆಗಳ ಕಲ್ಲುಗಳು ಸಮುದ್ರದ ಪಾಲಾಗಿವೆ. ಅಲ್ಲದೇ, ಉಳ್ಳಾಲದ ಸೋಮೇಶ್ವರ ಬೆಟ್ಟಂಪಾಡಿ ಬಳಿಯಲ್ಲಿಯೂ ಇದೇ ರೀತಿ ಕಡಲ್ಕೊರೆತ ಉಂಟಾಗಿದ್ದು, ರಸ್ತೆ ಸಮೀಪದ ತೆಂಗಿನ ಮರಗಳು ಬುಡಸಮೇತ ಉರುಳಿ ಬಿದ್ದಿವೆ.
ಅರಬ್ಬೀ ಸಮುದ್ರದಿಂದ ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ತೀರ್ವ ಕಡಲ್ಕೊರೆತ ಉಂಟಾಗಿದ್ದು, ಸೋಮೇಶ್ವರ, ಉಚ್ಚಿಲ ,ಕೈಕೊ, ಸಸಿಹಿತ್ಲು ಪ್ರದೇಶಗಳಲ್ಲಿ ಕಡಲ್ಕೊರೆತದ ಪ್ರಮಾಣ ಹೆಚ್ಚಾಗಿದ್ದು, ಮೀನುಗಾರರು ಹಾಗೂ ಸಮುದ್ರ ತಟ ವಾಸಿಸುವ ಕುಟುಂಬಗಳಿಗೆ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.