ಮಂಗಳೂರು: ಕುವೈತ್ನಿಂದ ಬಂದ ಮೂವರಿಗೆ ಐ.ಎಲ್.ಐ (Influenza Like Illness) ಪ್ರಕರಣದಿಂದ ಓರ್ವನಿಗೆ, ರೋಗಿ ಸಂಖ್ಯೆ P-6618 ಪ್ರಾಥಮಿಕ ಸಂಪರ್ಕದಿಂದ ಇಬ್ಬರಿಗೆ ಹಾಗೂ ಸಾರಿ(Severe Acute Respiratory Influence)ಪ್ರಕರಣದಿಂದ ಓರ್ವನಿಗೆ ಸೋಂಕು ತಗುಲಿದೆ.
ಐ.ಎಲ್.ಐ ಪ್ರಕರಣದಲ್ಲಿ ಪುತ್ತೂರಿನ 70 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ. ಕುವೈತ್ನಿಂದ ಜೂನ್ 17 ರಂದು ಆಗಮಿಸಿದ 26, 32 ವರ್ಷದ ಮಹಿಳೆಯರು, 59 ವರ್ಷದ ವೃದ್ಧನನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಇಂದು ಇವರ ಗಂಟಲು ದ್ರವದ ಮಾದರಿ ಲಭ್ಯವಾಗಿದ್ದು, ಇವರಲ್ಲಿ ಸೋಂಕು ದೃಢಗೊಂಡಿದೆ.
ರೋಗಿ ಸಂಖ್ಯೆ P-6618 ಪ್ರಾಥಮಿಕ ಸಂಪರ್ಕ ಹೊಂದಿರುವ 30 ವರ್ಷದ ಮಹಿಳೆ ಹಾಗೂ 38 ವರ್ಷದ ಪುರುಷ ಈ ಇಬ್ಬರನ್ನೂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಇಂದು ಇವರ ಗಂಟಲು ದ್ರವದ ಮಾದರಿ ಲಭ್ಯವಾಗಿದ್ದು, ಇವರಲ್ಲಿ ಸೋಂಕು ದೃಢಗೊಂಡಿದೆ. ಬೆಳ್ತಂಗಡಿ ನಿವಾಸಿ 56 ವರ್ಷದ ಪುರುಷನಿಗೆ ಸಾರಿ ಪ್ರಕರಣ ದಲ್ಲಿ ಸೋಂಕು ತಗುಲಿದೆ. ಇವರೆಲ್ಲರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.