ಕರ್ನಾಟಕ

karnataka

ETV Bharat / state

ಭೂವ್ಯಾಜ್ಯ ಪ್ರಕರಣಗಳಿಗೆ ನ್ಯಾಯಾಲಯ ತೀರ್ಮಾನ ಅಂತಿಮ: ಪ್ರಭಾವಿಗಳ ಮಧ್ಯಸ್ಥಿಕೆಗೆ ಇಲ್ಲ ಅವಕಾಶ - settlement of land disputes has become a highly lucrative avocation of public representatives

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ವ್ಯಾಜ್ಯ ಪ್ರಕರಣಗಳ ಲಾಭ ಪಡೆದು ಜನರಿಗೆ ವಂಚಿಸಿದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎನ್ನುತ್ತಾರೆ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು.

settlement of land disputes in Court
ಭೂವ್ಯಾಜ್ಯ ಪ್ರಕರಣಗಳಿಗೆ ನ್ಯಾಯಾಲಯ ತೀರ್ಮಾನ ಅಂತಿಮ

By

Published : Feb 2, 2021, 6:15 PM IST

ಮಂಗಳೂರು:ರಸ್ತೆ ವಿಚಾರ, ಭೂಮಿ ಪಾಲು ಸೇರಿದಂತೆ ಹಲವು ಭೂ ವ್ಯಾಜ್ಯಗಳ ಪರಿಹಾರಕ್ಕೆ ಕೆಲವರು ಜನಪ್ರತಿನಿಧಿಗಳ ಮೊರೆ ಹೋಗುವುದುಂಟು. ಆದರೆ ಅಂತಹ ಸಂದರ್ಭದಲ್ಲಿ ಜನಪ್ರತಿನಿಧಿಯೇ ಭೂಮಿ ನುಂಗಲು ಪ್ರಯತ್ನಿಸುತ್ತಾನೆ. ಅಲ್ಲದೆ ಪ್ರಭಾವಿಗಳು ಮಧ್ಯಸ್ಥಿಕೆ ವಹಿಸಿದರೂ ಯಾವುದಕ್ಕೂ ಪರಿಹಾರ ಸಿಗುತ್ತಿಲ್ಲ.

ಇದನ್ನೂ ಓದಿ...ಆಹಾರ ಖಾದ್ಯದಲ್ಲಿ ಜೀವಂತ ಹುಳು ಪತ್ತೆ: ಚಿಕ್ ಕಿಂಗ್​ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಹೀಗಾಗಿ ಹೆಚ್ಚಿನ ಪ್ರಕರಣಗಳು ನ್ಯಾಯಾಲಯದ ಕದ ತಟ್ಟುವ ಕಾರಣ ಅದರ ಲಾಭ ಪಡೆಯಲು ಹಾತೊರೆಯುವ ಪ್ರಭಾವಿಗಳಿಗೆ, ಜನಪ್ರತಿನಿಧಿಗಳಿಗೆ ಅದು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಭಾವಿಗಳ ಮಧ್ಯಸ್ಥಿಕೆಗೆ ಅವಕಾಶ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಸಣ್ಣಪುಟ್ಟ ವಿಚಾರಗಳನ್ನು ಹೊರತುಪಡಿಸಿ ಭೂ ವ್ಯಾಜ್ಯ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ವ್ಯಾಜ್ಯ ಪ್ರಕರಣಗಳ ಲಾಭ ಪಡೆದು ಜನರಿಗೆ ವಂಚಿಸಿದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎನ್ನುತ್ತಾರೆ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು. ಭೂ ವ್ಯಾಜ್ಯ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರದೆ ನ್ಯಾಯಾಲಯದ ಮೊರೆ ಹೋಗುವ ಕಾರಣಕ್ಕಾಗಿ ಅದರ ಲಾಭ ಪಡೆಯುವಲ್ಲಿ ಪ್ರಭಾವಿಗಳು ವಿಫಲರಾಗಿದ್ದಾರೆ.

ABOUT THE AUTHOR

...view details