ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನಗಳಲ್ಲಿ 3 ಕೊಲೆಯಾದ ಹಿನ್ನೆಲೆ ಮುನ್ನೆಚ್ಚರಿಕಾ ದೃಷ್ಟಿಯಿಂದ ದ.ಕ.ಜಿಲ್ಲಾಧಿಕಾರಿ ಶುಕ್ರವಾರದಿಂದ 3 ದಿನಗಳ ಕಾಲ ರಾತ್ರಿ ಬಂದ್ಗೆ ಆದೇಶ ನೀಡಿದ್ದಾರೆ. ಹೀಗಾಗಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಸಂಜೆ ಆರು ಗಂಟೆಯಾಗುತ್ತಲೇ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ತುರ್ತು ಅಗತ್ಯ ಇರುವ ಸೇವೆಗಳಿಗೆ ಮಾತ್ರ ರಿಯಾಯಿತಿಯಿದ್ದು, ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ 6 ಗಂಟೆಯ ಬಳಿಕ ಜನ ಸಂಚಾರಕ್ಕೂ ನಿಷೇಧ ಹೇರಲಾಗಿದೆ. ಪೊಲೀಸರು ಆದಷ್ಟು ಶೀಘ್ರವೇ ಮನೆಗೆ ಹೋಗುವಂತೆ ಎಲ್ಲ ವಾಹನ ಚಾಲಕರಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಚೆಕ್ ಪೋಸ್ಟ್ಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ತಪಾಸಣೆ ಮಾಡುತ್ತಿದ್ದಾರೆ.