ಕರ್ನಾಟಕ

karnataka

ETV Bharat / state

ದೊಡ್ಡ ಮಟ್ಟದ ಭೂಕಂಪನದ ಭಯ ಬೇಡ: ಹಿರಿಯ ವಿಜ್ಞಾನಿ ಕೆ.ವಿ.ರಾವ್

ಭೂಕಂಪನ ಕುರಿತು ಹಿರಿಯ ವಿಜ್ಞಾನಿ ಕೆ.ವಿ.ರಾವ್ ಈಟಿವಿ ಭಾರತದ ಜೊತೆ ಮಾತನಾಡಿದರು.

Senior scientist KV Rao speaks on Earthquake
ಹಿರಿಯ ವಿಜ್ಞಾನಿ ಕೆ.ವಿ ರಾವ್

By

Published : Jun 28, 2022, 8:32 PM IST

ಮಂಗಳೂರು (ದಕ್ಷಿಣ ಕನ್ನಡ): ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನದ ಅನುಭವವಾಗಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಭೂಕಂಪನ ನಡೆಯುತ್ತದೆ ಎಂಬ ಬಗ್ಗೆ ಯಾವುದೇ ಆತಂಕ ಬೇಡ ಎಂದು ಹಿರಿಯ ವಿಜ್ಞಾನಿ ಕೆ.ವಿ.ರಾವ್ ತಿಳಿಸಿದರು.

ಇತ್ತೀಚೆಗಿನ ಭೂಕಂಪನ ನಕ್ಷೆ ಪ್ರಕಾರ, ಈ ಭಾಗ ಮೂರನೇ ವಲಯದಲ್ಲಿದೆ. ಈ ಭಾಗದಲ್ಲಿ(ಮೂರನೇ ವಲಯ) ಹೆಚ್ಚು ಅಪಾಯವಿರುವುದಿಲ್ಲ. ಸಣ್ಣ ಮಟ್ಟಿಗೆ ಭೂಮಿ ಕಂಪಿಸುವುದು, ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು, ಪಾತ್ರೆಗಳು ಚೆಲ್ಲಾಪಿಲ್ಲಿಯಾಗುವುದು ನಡೆಯುತ್ತಿರುತ್ತದೆ.


ಇದೀಗ ಎರಡು ಬಾರಿ ರಿಕ್ಟರ್ ಮಾಪಕದಲ್ಲಿ 3ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪನ ಆಗಿರುವುದರಿಂದ ಇನ್ನೂ ದೊಡ್ಡ ಮಟ್ಟದಲ್ಲಿ ಭೂಕಂಪನ ಆಗಲಿದೆ ಎಂಬ ಆತಂಕಪಡುವ ಅಗತ್ಯ ಇಲ್ಲ. ಮತ್ತೊಮ್ಮೆ ಭೂಕಂಪನ ಆದರೂ ಕೂಡ ಇಷ್ಟೇ ಕಡಿಮೆ ತೀವ್ರತೆ ಹೊಂದಿರಲಿದೆ ಎಂದರು.

ಕಾರಣವೇನು? ಈರುಳ್ಳಿಯ ಆಕಾರದಲ್ಲಿರುವ ಭೂಮಿಯ ಪದರಗಳ ಮೇಲೆ ನಾವು ಜೀವಿಸುತ್ತಿದ್ದೇವೆ. ಈ ಪದರಗಳಲ್ಲಿ ನೀರು ಮಣ್ಣಿನ ವ್ಯತ್ಯಾಸಗಳಾದ ಈ ರೀತಿ ಕಂಪನ ಸಂಭವಿಸುತ್ತದೆ. ಭೂಮಿಗೆ ನೀರು ಇಂಗಿಸುವ ಸ್ವಾಭಾವಿಕ ಕ್ರಿಯೆಗೆ ತೊಡಕಾದಾಗ ಭೂಮಿಯ ಪದರಗಳ ಮಣ್ಣುಗಳು ನೀರಿನ ಕೊರತೆಯಿಂದ ಸಮತೋಲನ ಮಾಡಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ಕುಸಿತಗಳಾಗಿ ಭೂಕಂಪನದ ಅನುಭವವಾಗುತ್ತದೆ. ಭೂಮಿಯ ಮೇಲೆ ನದಿಗಳ ಹರಿಯುವಿಕೆ, ಮಳೆ, ಕಾಡು,‌ ನೀರು ಇಂಗುವಿಕೆ ಇವುಗಳ ವ್ಯತ್ಯಯಗಳಾದಾಗ ಈ ರೀತಿಯ ಕಂಪನಗಳಿಗೆ ಕಾರಣವಾಗುತ್ತದೆ. ಇದೀಗ ಎರಡು ಬಾರಿ ಕಂಪನದ ಅನುಭವವಾಗಿರುವ ಸ್ಥಳಗಳಲ್ಲಿ ಇವುಗಳಿಗಾದ ತೊಂದರೆಗಳ ಬಗ್ಗೆ ಸರ್ಕಾರ ಮತ್ತು ವಿಜ್ಞಾನಿಗಳು ಅಧ್ಯಯನ ನಡೆಸಬೇಕಾಗಿದೆ ಎಂದರು.

ಇದನ್ನು ಓದಿ:ಕೊಡಗುದಲ್ಲಿ ಭೂಕಂಪನ ಅನುಭವದ ಬೆನ್ನಲ್ಲೇ ಮನೆ ಮೇಲೆ ಉರುಳಿದ ಬಂಡೆ!

ABOUT THE AUTHOR

...view details